ವಿಜಯನಗರ: ತಾಂಡಾದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.
ಮುಳುಗುತ್ತಿದ್ದ ತಮ್ಮನ ರಕ್ಷಣೆಗೆ ತೆರಳಿದ್ದ ಮೂವರು ಅಕ್ಕಂದಿರ ಸಾವನ್ನಪ್ಪಿದ್ದಾರೆ. ಹೊಂಡದಲ್ಲಿ ಮುಳುಗುತ್ತಿದ್ದ ಅಭಿ ಎಂಬಾತನ ರಕ್ಷಣೆಗೆ ಸಹೋದರಿಯರು ತೆರಳಿದ್ದರು.
13 ವರ್ಷದ ಅಭಿ, 14 ವರ್ಷದ ಅಶ್ವಿನಿ ಹಾಗೂ 18 ವರ್ಷದ ಕಾವೇರಿ ಮತ್ತು 18 ವರ್ಷದ ಅಪೂರ್ವ ಮೃತ ದುರ್ದೈವಿಗಳು. ಈ ಘಟನೆ ಸಂಬಂಧ ಹರಪ್ಪನಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.