ಬೆಳಗಾವಿ : ಕಳೆದ 15 ವರ್ಷಗಳಿಂದ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ರಸ್ತೆ ಅಭಿವೃದ್ಧಿಯಾಗಬೇಕು ಎಂದು ರಸ್ತೆ ಮಧ್ಯದಲ್ಲೆ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಸ್ಥರು ಹೋಮ ನಡೆಸಿದ್ದಾರೆ.
ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಪ್ಪ ದೇವರೇ ಎಂದು ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ ನಡೆಸಲಾಗಿದೆ.
ಸುಟ್ಟಟ್ಟಿ ಗ್ರಾಮದಿಂದ ಯಲ್ಲಮ್ಮವಾಡಿ ಗ್ರಾಮದವರೆಗೆ ಸರಿಸುಮಾರು 6 ಕಿ.ಮೀ ರಸ್ತೆ ಕಳೆದ 15 ವರ್ಷದಿಂದ ಸಂಪೂರ್ಣವಾಗಿ ಹದಿಗೆಟ್ಟ ಪರಿಣಾಮವಾಗಿ, ವಾಹನ ಸವಾರರು ಗರ್ಭಿಣಿಯರು, ರೋಗಿಗಳು, ಶಾಲೆ ಮಕ್ಕಳು ಪ್ರತಿಕ್ಷಣವೂ ಸಂಕಷ್ಟ ಪಡುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.