ಹೊಸದಿಲ್ಲಿ, ೨೫-: ಬಂಗಾರದ ದರ ಬುಧವಾರ ದಾಖಲೆಯ ಏರಿಕೆ ಕಂಡಿದ್ದು ಮೊದಲ ಬಾರಿಗೆ ಪ್ರತೀ 10 ಗ್ರಾ ಚಿನ್ನ 57 ಸಾವಿರ ರೂಪಾಯಿ ಗಡಿ ದಾಟಿದೆ. ಕಳೆದ ಐದು ವಾರಗಳಿಂದ ವಾರಕ್ಕೊಮ್ಮೆ ಚಿನ್ನದ ದರದಲ್ಲಿ ಜಿಗಿತ ದಾಖಲಾಗುತ್ತಿದೆ. ಮಂಗಳವಾರ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಈ ಕ್ಯಾಲೆಂಡರ್ ವರ್ಷದಲ್ಲಿ ಚಿನ್ನವು ಶೇಕಡಾ 4 ರಷ್ಟು ಏರಿದೆ.
ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ನೋಡಲಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಗೆ ಸಂಬಂಧಿಸಿದ ಕಳವಳಗಳ ನಡುವೆ ಸುರಕ್ಷಿತ ಆಸ್ತಿಯ ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ನಂಬಲಾಗಿದ್ದು. ಇದೇ ಕಾರಣಕ್ಕೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ. ಇದರಿಂದಾಗಿ ಅದರ ಬೆಲೆಗಳು ಏರಿಕೆ ಕಾಣುತ್ತಿವೆ ಎಂದು ಕಾರಣ ನೀಡಲಾಗುತ್ತಿದೆ.
2023 ರಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆಗಳು ಸುಮಾರು 4% ಏರಿಕೆಯಾಗಿದೆ, ಸಾಗರೋತ್ತರ ಮಾರುಕಟ್ಟೆಯಲ್ಲಿನ ಲಾಭಗಳನ್ನು ಮತ್ತು ಡಾಲರ್ ಸೂಚ್ಯಂಕದಲ್ಲಿನ ದೌರ್ಬಲ್ಯವನ್ನು ದರ ಏರಿಕೆ ಕಾರಣ ಎನ್ನಲಾಗಿದೆ.