ಬೆಳಗಾವಿ, ಅ.9 : ಇಲ್ಲಿನ ಶಿವಬಸವನಗರದ ಶ್ರೀ ಸಿದ್ಧರಾಮೇಶ್ವರ ಪ್ರೌಢ ಶಾಲಾ ವಿಭಾಗದ 1992-93ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗು ಗುರುವಂದನಾ ಕಾರ್ಯಕ್ರಮ ದಿ. ೮ ರಂದು ಜರುಗಿತು.
ಶಿವಬಸವನಗರ ಎಸ್.ಜಿ.ಬಿ.ಐ.ಟಿ. ಸೆಮಿನಾರ್ ಹಾಲ್ ನಲ್ಲಿ ರವಿವಾರ ನಡೆದ ಸಮಾರಂಭದ ಸಾನಿಧ್ಯವನ್ನು ಪೂಜ್ಯಶ್ರೀ ಮ.ನಿ.ಪ್ರ. ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ಹಿರೇಮಠ ವಹಿಸಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಆಗಿನ ಪ್ರೌಢ ಹಾಗು ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸತ್ಕರಿಸಿ, ಗೌರವಿಸಲಾಯಿತು.