ದಾವಣಗೆರೆ : ಈದ್ ಮಿಲಾದ್ ದಿನ ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯೇ 70 ವರ್ಷದ ವಯೋವೃದ್ಧ ಪತ್ನಿಯ ಕತ್ತು ಸೀಳಿ ಕೊಲೆಗೈದ ದುರಂತ ಘಟನೆ ನಗರದ ರಾಮಕೃಷ್ಣ ಹೆಗಡೆ ನಗರದಲ್ಲಿ ನಡೆದಿದೆ.
ಶಾಕಿರಾ ಬೀ(70) ಕೊಲೆಯಾದ ವೃದ್ಧೆಯಾಗಿದ್ದು ಪತಿ, ಚಮನ್ ಸಾಬ (80) ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಾಹೀದಾ ಬೀಜ ಮತ್ತು ಚಮನ್ ಸಾಬಗೆ ಮಕ್ಕಳಿದ್ದರೂ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಡುಗೆ ಇತರೆ ವಿಚಾರವಾಗಿ ಆಗಾಗ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈದ್ ಮಿಲಾದ್ ದಿನವೂ ಅಡುಗೆ ವಿಚಾರಕ್ಕೆ ಜಗಳ ನಡೆದಿದ್ದು ವೃದ್ಧೆಯ ಕೊಲೆಯಲ್ಲಿ ಮುಕ್ತಾಯವಾಗಿದೆ. ಆಜಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.