ಬೆಳಗಾವಿ, ೩೦- ಖ್ಯಾತ ಕವಿ ಹಾಗು ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಾ. ಜಿನದತ್ತ ದೇಸಾಯಿ ಅವರ ಮಹಾಂತೇಶ ನಗರದ ಮನೆಗೆ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ದಿ.೨೯ ರಂದು ಸಂಜೆ ಭೇಟಿ ನೀಡಿ ಸುಮಾರು ಹದಿನೈದು ನಿಮಿಷಗಳ ಕಾಲ ಡಾ. ದೇಸಾಯಿಯವರೊಂದಿಗೆ ಕಳೆದು ಅವರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಲೇಖಕ ದಿ. ಅನಂತ ಕಲ್ಲೋಳ ಅವರು ಕನ್ನಡಕ್ಕೆ ಭಾಷಾಂತರಿಸಿದ “ಮಹಾಜನ ವರದಿ” ಕೃತಿಯನ್ನು ಕಂಡ ಎಚ್ ಕೆ. ಪಾಟೀಲರು ಇಂಥ ಅತ್ಯಮೂಲ್ಯ, ಸಂಗ್ರಹಯೋಗ್ಯವಾದ ಈ
ಕೃತಿ ಬಂದುದೇ ನನಗೆ ಗೊತ್ತಿರಲಿಲ್ಲ ಎಂದು ಅಚ್ಚರಿ ಹಾಗೂ ಸಂತೋಷ ವ್ಯಕ್ತ ಪಡಿಸಿದರು. ತಮಗೊಂದು ಪ್ರತಿ ತರಿಸಿ ಕೊಡುವಂತೆಯೂ ಕೇಳಿದರು.
ಬೆಳಗಾವಿ ಗಡಿ ವಿಚಾರದಲ್ಲಿ ತಮ್ಮ ಮತ್ತು ಡಾ ದೇಸಾಯಿಯವರ ವಿಚಾರಗಳು ಒಂದೇ ಇರುವುದು ನೆಮ್ಮದಿ ತಂದಿದೆ ಎಂದು ಹೇಳಿದರು.
ಡಾ. ದೇಸಾಯಿಯವರ ಹಳೆಯ ಸ್ನೇಹಿತರಾದ ಪಾಟೀಲರು ಹಳೆಯ ನೆನಪುಗಳನ್ನು ಮೆಲಕು ಹಾಕಿದರು.