ಹುಬ್ಬಳ್ಳಿ: ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಪುನಾರಂಭ ಆಗಿದೆ. ಇಂದಿನಿಂದ ಹುಬ್ಬಳ್ಳಿ-ದೆಹಲಿ ದೈನಂದಿನ ವಿಮಾನ ಸೇವೆ ಆರಂಭಗೊಂಡಿದ್ದು, ಹುಬ್ಬಳ್ಳಿ-ದೆಹಲಿ ವಿಮಾನ ಸೇವೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು
ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ. @IndiGo6E pic.twitter.com/WlrpmR6nSQ
— Pralhad Joshi (@JoshiPralhad) November 14, 2022
ಈಗಾಗಲೇ ಹುಬ್ಬಳ್ಳಿ-ದೆಹಲಿ ವಿಮಾನ ಸೇವೆ ಆರಂಭವಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೋಶಿ ಮನವಿ ಮಾಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ ಠಾಕ್ರೆ, ಇಂಡಿಗೋ ವಿಮಾನ ಸೇವೆ ಆರಂಭದ ಪೂರ್ವದಲ್ಲಿ ವಿಮಾನದ ತಾಂತ್ರಿಕ ಸ್ಥಿತಿ ಪರಿಶೀಲನೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದರು.