ಬೆಳಗಾವಿ : ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಅವಳ ಪತಿ ತನ್ನ ಆರು ಜನ ಸ್ನೇಹಿತರೊಂದಿಗೆ ಸೇರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ಹಲಕಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಯಲ್ಲಪ್ಪ ಕಸೊಳ್ಳಿ ಎಂಬವ ತನ್ನ ಸ್ನೇಹಿತರೊಂದಿಗೆ ಸೇರಿ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ 24 ವರ್ಷದ ರಮೇಶ ಗುಂಜಗಿಯನ್ನು ಕೊಲೆ ಮಾಡಿದ್ದಾನೆ.
ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ನಿವಾಸಿಯಾಗಿದ್ದ ರಮೇಶ ಗುಂಜಗಿ ತನ್ನ ಮನೆಯ ಹಿಂದೆ ಮನೆ ಮಾಡಿಕೊಂಡಿದ್ದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಮಹಿಳೆಯ ಗಂಡನಿಗೆ ಈ ವಿಷಯ ಗೊತ್ತಾದ ನಂತರ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಆಗ ಯಲ್ಲಪ್ಪನಿಗೆ ಕೊಲೆಯಾದ ರಮೇಶನು ಎರಡೂವರೆ ಲಕ್ಷ ರೂಪಾಯಿ ದಂಡ ನೀಡಿ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಆದರೆ 15 ದಿನಗಳ ನಂತರ ಪ್ರಿಯಕರ ರಮೇಶ ಬೇಡ ಎಂದು ಮತ್ತೆ ಗಂಡ ಯಲಪ್ಪನೊಂದಿಗೆ ಪುನಃ ಸಂಪರ್ಕಕ್ಕೆ ಬಂದು ಆಕೆ ತನ್ನ ತವರು ಮನೆ ಸೇರಿದ್ದಳು. ರಮೇಶ ನನ್ನು ಬಿಟ್ಟು ಬಂದ ಮಹಿಳೆ ಗಂಡ ಯಲ್ಲಪ್ಪ ಮತ್ತು ಇತರ 6 ಜನರೊಂದಿಗೆ ಆತನ ಕೊಲೆ ಮಾಡಿಸಿದ್ದಾಳೆಂದು ಆರೋಪಿಸಲಾಗಿದೆ.
ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.