ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಾರ್ವಜನಿಕ ಸಭೆ (ಮಹಾಮೇಳ) ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಬೇಕು ಮತ್ತು ಮಹಾರಾಷ್ಟ್ರದ ನಾಯಕರು ಅದರಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಶಿವಸೇನೆ (ಯುಬಿಟಿ) ಒತ್ತಾಯಿಸಿದೆ.
ಬೆಳಗಾವಿಯ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಗೊಂಡಿದೆ. ಕರ್ನಾಟಕದ ಗಡಿ ಭಾಗದ ಮರಾಠಿ ಭಾಷಿಕ ಜನತೆಯ ವೇದಿಕೆಯಾದ ಎಂಇಎಸ್ ತಮ್ಮ ಬಹುದಿನಗಳ ಬೇಡಿಕೆಗಾಗಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದೆ. ನೆರೆಯ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಎಂಇಎಸ್ 9ರಂದು ಮಹಾಮೇಳಾವ ನಡೆಸಲು ಉದ್ದೇಶಿಸಿದೆ. ಶಿವಸೇನಾ (ಯುಬಿಟಿ) ಜಿಲ್ಲಾಧ್ಯಕ್ಷ ವಿಜಯ ದೇವಾನೆ ನೇತೃತ್ವದ ನಿಯೋಗ ಪ್ರಭಾರ ಜಿಲ್ಲಾಧಿಕಾರಿ ಸಂಜಯ ಶಿಂಧೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
“ನಾವು ಜಿಲ್ಲಾಧಿಕಾರಿ ಮನವಿ ಮಾಡಿದ್ದೇವೆ.
ನಮ್ಮ ಬೇಡಿಕೆಯನ್ನು ಬೆಳಗಾವಿ ಜಿಲ್ಲೆಯ ಮತ್ತು ಕರ್ನಾಟಕ ಸರ್ಕಾರಕ್ಕೆ ತಿಳಿಸಲು ನಾವು ಅವರಿಗೆ ವಿನಂತಿಸಿದ್ದೇವೆ. ಪ್ರತಿ ವರ್ಷ ಎಂಇಎಸ್ ಸಾರ್ವಜನಿಕ ಸಭೆಯನ್ನು ನಡೆಸುತ್ತದೆ ಮತ್ತು ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಕಾರಣವನ್ನು ಬೆಂಬಲಿಸುವ ನಾಯಕರನ್ನು ಕರೆಯುತ್ತದೆ. ನಾವು ಈ ಬಾರಿಯೂ ಹೋಗಿ ಕರ್ನಾಟಕ ಸರ್ಕಾರವು ದಬ್ಬಾಳಿಕೆಯ ಕ್ರಮವನ್ನು ವಿರೋಧಿಸುವೆವು. ಕರ್ನಾಟಕ ಸರ್ಕಾರವು ಅಂತಹ ಸಭೆಗೆ ಹಾಜರಾಗದಂತೆ ಮರಾಠಿ ನಾಯಕರನ್ನು ತಡೆಯುತ್ತದೆ,” ಎಂದು ದೇವಾನೆ ಹೇಳಿದರು.
ಅನುಮತಿ ನೀಡದಿದ್ದರೆ ನಿಪ್ಪಾಣಿ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಗನೊಳ್ಳಿ ಚೆಕ್ ಪೋಸ್ಟನಲ್ಲಿ ಪ್ರತಿಭಟನೆ ನಡೆಸುತ್ತೇವೆ ಮತ್ತು ಕರ್ನಾಟಕದ ವಾಹನಗಳನ್ನು ಪ್ರವೇಶಿಸದಂತೆ ತಡೆಯುತ್ತೇವೆ ಮತ್ತು ಕರ್ನಾಟಕದ ಮಂತ್ರಿಗಳನ್ನು ಕೊಲ್ಲಾಪುರಕ್ಕೆ ಬರಲು ಬಿಡುವುದಿಲ್ಲ ಎಂದು ದೇವಣೆ ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಬೆಳಗಾವಿಗೆ ಬರುವ ಕರ್ನಾಟಕದ ಬಹಳಷ್ಟು ಶಾಸಕರು, ಮಂತ್ರಿಗಳು ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೆಟ್ಟಿ ನೀಡುತ್ತಾರೆ. ಕರ್ನಾಟಕ ಕಳೆದ ಮೂರು ವರುಷದಿಂದ ಬೆಳಗಾವಿಯಲ್ಲಿ ಮಹಾ ಮೇಳಾವಕ್ಕೆ ಅನುಮತಿ ನೀಡದಿದ್ದರೂ ಶಿವಸೇನೆ ಕರ್ನಾಟಕದ ರಾಜಕಾರಣಿಗಳ ಕೊಲ್ಹಾಪುರ್ ಬೆಟ್ಟಿಗೆ ಅಡ್ಡಿಯಾಗಿಲ್ಲ. ಆದರೆ ಈ ವರುಷ ಹೀಗಿರುವುದಿಲ್ಲ. ಅನುಮತಿ ದೊರೆಯದಿದ್ದರೆ ಅವರಿಗೆ ಮಹಾರಾಷ್ಟ್ರದಲ್ಲಿ ಕಾಲಿಡಲೂ ಬಿಡಲ್ಲ ಎಂದು ದೇವನೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಶಾಂತಿ ಸುವ್ಯಸ್ತೆ ಕಾಪಾಡಿಕೊಳ್ಳಲು ಕಳೆದ ಮೂರು ವರುಷದ ಅನುಮತಿ ನೀಡಿಲ್ಲ. ಈ ವರುಷವೂ ಅನುಮತಿ ದೊರೆಯುವ ಸಾಧ್ಯತೆ ಕಡಿಮೆಯಿದೆ. ಬೆಳಗಾವಿಯ ಟಿಳಕವಾಡಿಯಲ್ಲಿ ಕೊನೆಯ ಬಾರಿ ನಡೆದ ಮಹಾಮೇಳಾವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದರು. ಇದು ಬಹು ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಹಿಂದೆ ಆಯೋಜಿಸಿದ್ದ ಮಹಾಮೇಳಾವಾದಲ್ಲಿ ಕನ್ನಡ ಕಾರ್ಯಕರ್ತರು ಎಂಈಎಸ್ ಮುಖಂಡರ ಮುಖಕ್ಕೆ ಕಪ್ಪು ಮಸಿ ಎರಚಿದ್ದರು. ಇಂತಹ ಘಟನೆ ತಡೆಯಲು 2020ರಿಂದ ಎಂಈಎಸ್ ಗೆ ಮಹಾಮೇಳಾವಕ್ಕೆ ಅನುಮತಿ ನೀಡಲಾಗಿಲ್ಲ.
ಕರ್ನಾಟಕ ಸರಕಾರ ಬೆಳಗಾವಿಯಲ್ಲಿ ನಡೆಸುವ ವಿಧಾನ ಸಭೆ ಅಧಿವೇಶನಕ್ಕೆ ಪ್ರತಿಭಟಿಸಿ ಅದಕ್ಕೆ ಪ್ರತಿಯಾಗಿ ಎಂಈಎಸ್ ಮೊದಲ ಅಧಿವೇಶನ ಜರುಗಿದ 2006ರಿಂದ ಅಧಿವೇಶನದ ಮೊದಲ ದಿನ ಮಹಾಮೇಳಾವ ಆಯೋಜಿಸುತ್ತಿದೆ. ಶಾಂತ ರೀತಿಯಿಂದ ಸಭೆ ಆಯೋಜಿಸುವುದಾಗಿ ಅನುಮತಿ ಪಡೆದು ಮಹಾರಾಷ್ಟ್ರದಿಂದ ನಾಯಕರನ್ನು ಅವ್ಹಾಣಿಸಿ ಅವರಿಂದ ಪ್ರಚೋದನಾತ್ಮಕ ಬಾಷಣ ಮಾಡಿಸಿ ಶಾಂತಿ ಸುವ್ಯಸ್ತೆಗೆ ದಕ್ಕೆ ಉಂಟು ಮಾಡಿರುವುದರಿಂದ ಕಳೆದ ಮೂರು ವರುಷ ಅನುಮತಿ ನೀಡಿಲ್ಲ. ಆದರೂ ಎಂಈಎಸ್ ಬೆಳಗಾವಿಯಿಂದ 13ಕಿಮಿ ಅಂತರದಲ್ಲಿರುವ ಮಹಾರಾಷ್ಟ್ರದ ಗಡಿ ಗ್ರಾಮ ಶಿನ್ನೋಳಿ ಯಲ್ಲಿ ಸಭೆ ಮಾಡಿತ್ತು. ಈ ವರುಷವೂ ಅನುಮತಿ ದೊರೆಯುವ ಸಾಧ್ಯತೆ ಇಲ್ಲ. ಹಾಗಾಗಿ ಶಿನ್ನೋಳಿಯಲ್ಲೇ ಸಭೆ ಜರುಗುವ ಸಾಧ್ಯತೆಯಿದೆ.