Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಖಾಸಗಿ ವಾಹನದಲ್ಲಿ ಇವಿಎಂ ಮಷಿನ್ ಅಕ್ರಮ ಸಾಗಾಟ


ಶಿಮ್ಲಾ, ೧೪- ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಮ್‌ಪುರ ಕ್ಷೇತ್ರದಲ್ಲಿ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆ ದತ್ತನಗರ ಪಂಚಾಯಿತಿ ಮತಗಟ್ಟೆಯ ಆರು ಜನ ಆರೋಪಿಗಳನ್ನು ಅಮಾನತುಗೊಳಿಸಲಾಗಿದೆ.

ರಾಂಪುರದ ಎಸ್‌ಡಿಎಂ ಮತ್ತು ಡಿಎಸ್‌ಪಿ ಅವರು, ಪಕ್ಷದ 6 ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮತದಾನ ಮುಗಿದ ಬಳಿಕ ಕಾಂಗ್ರೆಸ್ ಸದಸ್ಯೆ ಅಲ್ಕಾ ಲಂಬಾ ಟ್ವೀಟ್ ಮಾಡಿದಾಗ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಂಪುರದಲ್ಲಿ ಮತ್ತೊಮ್ಮೆ ಖಾಸಗಿ ವಾಹನದಲ್ಲಿ ಇವಿಎಂ ಯಂತ್ರಗಳು ಪತ್ತೆಯಾಗಿವೆ. ಜನರು ಇವಿಎಂ ಇದ್ದ ಖಾಸಗಿ ವಾಹನವನ್ನು ಸುತ್ತುವರೆದು ಪೊಲೀಸರ ಬರುವಿಕೆಗೆ ಕಾಯುತ್ತಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಆಡಳಿತಕ್ಕೆ ದೊಡ್ಡ ಸವಾಲು ಎಂದು ಅಲ್ಕಾ ಲಾಂಬಾ ಟ್ವೀಟ್ ಮಾಡಿದ್ದಾರೆ.

ರಾಂಪುರ, ದತ್ತನಗರಕ್ಕೆ ಹೊಂದಿಕೊಂಡಿರುವ ಪಂಚಾಯಿತಿಯಲ್ಲಿ ಮತದಾನ ಮುಗಿದ ಬಳಿಕ ಖಾಸಗಿ ವಾಹನದ ಮೂಲಕ ಇವಿಎಂ ಯಂತ್ರಗಳನ್ನು ರಾಂಪುರ ಸ್ಟ್ರಾಂಗ್ ರೂಂಗೆ ತರಲಾಗುತ್ತಿತ್ತು. ಅಷ್ಟರಲ್ಲಿ ಈ ವಿಷಯ ತಿಳಿದ ರಾಂಪುರ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ರಾಷ್ಟ್ರೀಯ ಹೆದ್ದಾರಿ-5ರಲ್ಲಿ ವಾಹನ ನಿಲ್ಲಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಾಹನ ತಡೆದರು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

 


A B Dharwadkar
the authorA B Dharwadkar

Leave a Reply