ಮಂಗಳೂರು: 20,000 ಅಂಗನವಾಡಿ ಮತ್ತು 6000 ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 25 ರಂದು ಎನ್ಇಪಿ ಜಾರಿಗೆ ಉದ್ದೇಶಿಸಿದ್ದು, ಇದರ ರಾಜ್ಯ ಪಠ್ಯಕ್ರಮ ನವೆಂಬರ ಅಂತ್ಯಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಎನ್ಇಪಿ ವಿಶೇಷತೆ ಎಂದರೆ ಪಠ್ಯಪುಸ್ತಕಗಳನ್ನು ಹೇರುವುದಿಲ್ಲ. ಬದಲಾಗಿ ಪಠ್ಯದ ಹೊರೆ ಕಡಿಮೆಯಾಗಲಿದೆ. ಒಂದನೇ ಮತ್ತು ಎರಡನೇ ತರಗತಿಗೆ ಎರಡೆರಡು ಪುಸ್ತಕಗಳು ಇರುತ್ತವೆ. ಸಂಖ್ಯಾಶಾಸ್ತ್ರ ವಿಚಾರಗಳನ್ನು ತಿಳಿಸುವುದು, ಅಕ್ಷರ ಜ್ಞಾನ ನೀಡುವ ಪುಸ್ತಕ ಇರುತ್ತದೆ. ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಚಿಲಿಪಿಲಿ, ನಲಿ-ಕಲಿ ಮೂಲಕ ಎನ್ಇಪಿ ಆಶಯಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಎನ್ಇಪಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.