Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಶಬರಿಮಲೆ ಕುರಿತು ಮಾಹಿತಿ


ಅಯ್ಯಪ್ಪನ ಆರಾಧನೆಗಾಗಿಯೇ ವಿೂಸಲಾಗಿರುವ ಕೇರಳದ ದೇವಾಲಯಗಳಲ್ಲಿ ಶಬರಿಮಲೆಯ ಶ್ರೀ ಧರ್ಮಶಾಸ್ತ ದೇವಾಲಯವು ಸುಪ್ರಸಿದ್ಧವಾದುದು ಮತ್ತು ಪ್ರಧಾನವಾದುದು. ಈ ದೇವಾಲಯವು ಪಟ್ಟಣಂತಿಟ್ಟ ಜಿಲ್ಲೆಯ ಪ್ರಸಿದ್ಧವಾದ ಬೆಟ್ಟದ ತುದಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದೆ.

ಎಲ್ಲಾ ಮತಗಳಿಗೆ ಸೇರಿದವರಿಗೂ ಇಲ್ಲಿ ಪ್ರವೇಶಾವಕಾಶವಿದೆ. ಸನ್ನಿಧಾನದ ಪೂರ್ವಕ್ಕೆ ಸ್ವಾಮಿ ಅಯ್ಯಪ್ಪನ ಆತ್ಮೀಯ ಮಿತ್ರನಾದ ವಾವರನಿಗೆ ಸಮರ್ಪಿತವಾದ ವಾವರನಡ ಇದೆ. ಇದು ಮತೀಯ ಸಾಮರಸ್ಯಕ್ಕೆ ಒಂದು ನಿದರ್ಶನವಾಗಿದೆ. ಅಯ್ಯಪ್ಪ ಸ್ವಾಮಿಯ ದೇವಾಲಯವು ವರ್ಷದ ಎಲ್ಲಾ ದಿನಗಳಲ್ಲಿಯೂ ತೆರೆದಿರುವುದಿಲ್ಲ ಎಂಬುದು ಈ ಪುಣ್ಯಕ್ಷೇತ್ರದ ವಿಶೇಷತೆಯಾಗಿದೆ.

ಮಂಡಲಪೂಜೆಯ ಸಮಯದಲ್ಲಿ ಮತ್ತು ಮಕರವಿಳಕ್ಕು, ವಿಶು ಎಂಬೀ ವಿಶೇಷ ಸಂದರ್ಭಗಳಲ್ಲಿ ಹಾಗೂ ಪ್ರತಿಯೊಂದು ಸೌರಮಾನ ತಿಂಗಳ ಮೊದಲ ದಿನಗಳಲ್ಲಿ ಮಾತ್ರ ಇಲ್ಲಿ ಪೂಜೆಗಾಗಿ ದೇವರ ‘ನಡೆ’ ತೆರೆದಿರುತ್ತದೆ.

ತೀರ್ಥಯಾತ್ರಿಕರು 41 ದಿನಗಳ ಕಾಲ ವ್ರತಾನುಷ್ಠಾನ ಮಾಡಿಯೇ ಶಬರಿಮಲೆ ಸ್ವಾಮಿಯ ದರ್ಶನ ಮಾಡಬೇಕೆಂಬುದು ಜನರ ನಂಬಿಕೆ. ತೀರ್ಥಯಾತ್ರಿಕರು ಸಾಂಪ್ರದಾಯಿಕವಾದ ಅರಣ್ಯ ಮಾರ್ಗದ ಮೂಲಕ ಶಬರಿಮಲೆಗೆ ಹೋಗುತ್ತಾರೆ. ಪಂಬೆಯಿಂದ ದೇವಾಲಯದತ್ತ ಸಾಗುವ ದಾರಿ ಇತರ ದಾರಿಗಳಿಗೆ ಹೋಲಿಸಿದಲ್ಲಿ ಹೆಚ್ಚು ಸುಗಮವಾದುದು.

ನಾಗರಾಜ: ಅಯ್ಯಪ್ಪ ಸ್ವಾಮಿಯ ಶ್ರೀಕೋವಿಲ್ (ಪ್ರಧಾನ ಗರ್ಭಗುಡಿ) ಸಮೀಪದಲ್ಲಿಯೇ ನಾಗರಾಜನನ್ನು ಪ್ರತಿಷ್ಠಾಪಿಸಲಾಗಿದೆ. ತೀರ್ಥಯಾತ್ರಿಕರು ಅಯ್ಯಪ್ಪ ಸ್ವಾಮಿ ಮತ್ತು ಕನ್ನಿಮೂಲಗಣಪತಿಯ ದರ್ಶನ ಮಾಡಿದ ಬಳಿಕ ನಾಗರಾಜನಿಗೆ ಪೂಜೆ ಸಲ್ಲಿಸುತ್ತಾರೆ.


Leave a Reply