ಬೆಳಗಾವಿ : ಬೆಳಗಾವಿಯಲ್ಲಿ ಜರುಗುವ ಕರ್ನಾಟಕ ವಿಧಾನ ಮಂಡಳ ಅಧಿವೇಶನಕ್ಕೆ ಪ್ರತಿಯಾಗಿ ಮೊದಲ ದಿನವೇ ‘ಮಹಾಮೇಳ’ದ ಹೆಸರಿನ ಸಭೆ ನಡೆಸುವ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ಬಾರಿ ಕೇಂದ್ರದ ಮಾಜಿ ಸಚಿವ ಶರದ ಪವಾರ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಸೇರಿದಂತೆ ಹತ್ತು ನಾಯಕರನ್ನು ಅಹ್ವಾನಿಸಲಿದೆ.
ಈ ಕುರಿತು ಪತ್ರ ಬರೆದಿರುವ ಎಂಇಎಸ್, ಸದ್ಯದ ಬೆಳವಣಿಗೆ ನಿರೂಪಿಸಿ ಆಮಂತ್ರಣ ನೀಡಿದೆ, ಅಲ್ಲದೇ ಭೇಟಿಗೆ ಸಮಯವನ್ನೂ ಕೇಳಿದೆ. ಸಮಿತಿ ಸೂತ್ರಗಳನ್ವಯ ಮಹಾರಾಷ್ಟ್ರದ ಪ್ರತಿ ರಾಜಕೀಯ ಪಕ್ಷಗಳ ತಲಾ ಇಬ್ಬರು ನಾಯಕರು, ಶಿವಸೇನೆಯ ಎರಡೂ ಬಣಗಳ ಮುಖಂಡರು ಸಭೆಗೆ ಹಾಜರಿರಲ್ಲಿದ್ದು, ಸುಮಾರು ಹತ್ತು ಸಾವಿರ ಮರಾಠಿಗರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.