ಹೊಸದಿಲ್ಲಿ: ಇಂಜಿನೀಯರಿಂಗ ಪ್ರವೇಶಕ್ಕೆ ಮಹತ್ವದ ಪ್ರವೇಶ ಪರೀಕ್ಷೆಯಾಗಿರುವ ಜೆಇಇ ಮುಖ್ಯ ಪರೀಕ್ಷೆ 2023ರ ಜನವರಿ 24 ರಿಂದ 31 ರವರೆಗೆ ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದ್ದು, ಗಣರಾಜ್ಯೋತ್ಸವ ದಿನ ಹೊರತುಪಡಿಸಿ ಮುಂದಿನ ವರ್ಷ ಜನವರಿ 24 ರಿಂದ 31 ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಗುರುವಾರ ಜೆಇಇ ಮೇನ್ 2023, ಪದವಿಪೂರ್ವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ವಿವರವಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೆಇಇ ಮೇನ್ 2023 ಎರಡು ಅವಧಿಗಳಲ್ಲಿ ನಡೆಯಲಿದೆ, ಮೊದಲ ಅಧಿವೇಶನವನ್ನು ಜನವರಿಯಲ್ಲಿ ಮತ್ತು ಎರಡನೆಯದನ್ನು ಏಪ್ರಿಲ್ನಲ್ಲಿ ನಿಗದಿಪಡಿಸಲಾಗಿದೆ.
ಎರಡನೇ ಅವಧಿಯ ಪರೀಕ್ಷೆಗಳನ್ನು ಏಪ್ರಿಲ್ ನಲ್ಲಿ ನಡೆಸಲಾಗುವುದು. ಡಿಸೆಂಬರ್ 15 ರಿಂದ ಜನವರಿ 12ರವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ಪ್ರಾಧಿಕಾರದ ಪರೀಕ್ಷಾ ವಿಭಾಗದ ಹಿರಿಯ ನಿರ್ದೇಶಕರ ಸಾಧನಾ ಪರಾಶರ ತಿಳಿಸಿದ್ದಾರೆ.
ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಕನ್ನಡ, ಇಂಗ್ಲೀಷ, ಹಿಂದಿ, ಅಸ್ಸಾಮಿ, ಗುಜರಾತಿ, ಮಲಯಾಳಂ, ಮರಾಠಿ, ತಮಿಳು, ಪಂಜಾಬಿ, ತೆಲುಗು, ಉರ್ದು, ಬಂಗಾಳಿ, ಒಡಿಯಾ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.