ಬೆಳಗಾವಿ : ನಿಪ್ಪಾಣಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜನೆ ಮಾಡಿದ್ದ ದಾಂಡಿಯಾ ಜೊಲ್ಲೆ ದಂಪತಿ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಜಿಲ್ಲೆಯ ನಿಪ್ಪಾಣಿಯ ಶಿವಶಂಕರ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜನೆ ಮಾಡಿದ್ದ ದಾಂಡಿಯಾ ಉತ್ಸವದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿ ದಾಂಡಿಯಾ ಹಾಗೂ ಗರ್ಬಾ ಪಾರಂಪರಿಕ ನೃತ್ಯದಲ್ಲಿ ಹೆಜ್ಜೆ ಹಾಕಿದರು.
ಇವರಿಗೆಲ್ಲ ಸಚಿವ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಬ್ ಜೊಲ್ಲೆ ಸಾಥ್ ನೀಡಿದರು. ಆರೆಂಜ್ ಹಾಗೂ ಗ್ರೀನ್ ಕಾಂಬಿನೇಷನ್ನ ಉಡುಗೆ ತೊಟ್ಟ ಜೊಲ್ಲೆ ಅವರು ತಮ್ಮ ಕುಟುಂಬಸ್ಥರ ಜತೆಗೆ ಹೆಜ್ಜೆ ಹಾಕಿದರು.
ನಿಪ್ಪಾಣಿ ನಗರದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಜೊಲ್ಲೆ ಗ್ರೂಪ್ ವತಿಯಿಂದ ವಿಶೇಷವಾಗಿ ಆಯೋಜಿಸಿದ್ದ ದಾಂಡಿಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ನನ್ನ ಪ್ರೀತಿಯ ಪತಿ, ಸೊಸೆ, ಸುಪುತ್ರ ಜ್ಯೋತಿಪ್ರಸಾದ ಹಾಗೂ ಮಹಿಳಾ ಸಹೋದರಿಯರ ಜೊತೆಗೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ, ಸಂಭ್ರಮಿಸಲಾಯಿತು.#Navaratri | #Nippani | #Dandiya pic.twitter.com/s4G55MajEf
— Shashikala Jolle (@ShashikalaJolle) October 2, 2022
ಬಳಿಕ ಮಾತನಾಡಿದ ಅವರು, ದಾಂಡಿಯಾ ಹಾಗೂ ಗರ್ಬಾ ಡಾನ್ಸ್ ಎನ್ನುವ ಬದಲು ನಮ್ಮದೇ ದೇಶಿ ಶೈಲಿಯ ಜನಪದ ಕಲೆ ಎನ್ನಬಹುದು. ಮೂರು ವರ್ಷಗಳ ಕೋವಿಡ್ ಬಳಿಕ ಹಬ್ಬ ಹರಿದಿನಗಳ ಕಳೆಗಟ್ಟಿವೆ. ಕೋವಿಡನಿಂದ ಮಂಕು ಬಡಿದುಕೊಂಡಿದ್ದ ಹಬ್ಬಗಳನ್ನು ಈಗ ಜನ ಉಲ್ಲಾಸದಿಂದ ಆಚರಿಸುತ್ತಿದ್ದಾರೆ ಎಂದರು.