ಕೊಲ್ಹಾಪುರ, ೧೨: ಕರ್ನಾಟಕ ಸರಕಾರ ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಶಿವಸೇನೆ ಕೊಲ್ಹಾಪುರದಲ್ಲಿನ ಕನ್ನಡ ನಾಮಫಲಕಗಳನ್ನು ಅವುಗಳಿಗೆ ಕಿತ್ತು ಬೆಂಕಿ ಹಚ್ಚಿದೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಬಳಗದ ಶಿವಸೇನೆ ಕಾರ್ಯಕರ್ತರು ಕೊಲ್ಲಾಪುರದಲ್ಲಿರುವ ವಾಣಿಜ್ಯ ವ್ಯವಹಾರಗಳ ಕನ್ನಡ ನಾಮಫಲಕ ಕಿತ್ತು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಪೋಸ್ಟರಗಳನ್ನು ಕಿತ್ತು ಧ್ವಂಸ ಮಾಡಲಾಗಿದೆ.
ಬೆಳಗಾವಿಯಲ್ಲಿ ಮರಾಠಿ ನಾಮಫಲಕ ತೆಗೆಯಲಾಗುತ್ತಿದೆ. ಮರಾಠಿಗರ ಮೇಲೆ ಕರ್ನಾಟಕ ದೌರ್ಜನ್ಯ ಮುಂದುವರೆಸಿದೆ. ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ, ಕೆಲವೇ ದಿನಗಳಲ್ಲಿ ಅದು ಮಹಾರಾಷ್ಟ್ರಕ್ಕೆ ಸೇರಲಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಜೊತೆಗೆ ಇಂಗ್ಲಿಷ ಬೋರ್ಡ ಹಾಕಲಿ ಆದರೆ ಕನ್ನಡ ಬೋರ್ಡ ಹಾಕಬಾರದು ಎಂದು ಕೊಲ್ಲಾಪುರ ಶಿವಸೇನೆ ಮುಖಂಡ ಸಂಜಯ ಪವಾರ ಹೇಳಿಕೆ ನೀಡಿದ್ದಾರೆ.