ಧಾರವಾಡ: ಸ್ಕೂಟಿಯಲ್ಲಿದ್ದ 5 ಲಕ್ಷ ರೂ. ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.
ಅಹಮ್ಮದಬಾದ ನಿವಾಸಿ ವಿಜಯಕುಮಾರ ಜೈನ್ ಎಂಬುವರ ಹಣ ಕಳ್ಳತನವಾಗಿದ್ದು ವಿಜಯಕುಮಾರ ಮನೆ ವ್ಯವಹಾರಕ್ಕಾಗಿ 5 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ಖದೀಮರು ವಿಜಯಕುಮಾರ ನನ್ನ ಫಾಲೋ ಮಾಡಿದ್ದಾರೆ.
ದೇಶಪಾಂಡೆ ನಗರದಲ್ಲಿ ಟ್ರಾಫಿಕ್ ಜಾಮ್ ಸಮಯದಲ್ಲಿ ಖದೀಮರು ಸ್ಕೂಟಿಯಲ್ಲಿದ್ದ 5 ಲಕ್ಷ ತೆಗೆದುಕೊಂಡು ಪರಾರಿ ಆಗಿದ್ದಾರೆ. ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.