ಮೂಡಲಗಿ : ಪಟ್ಟಣದ ನವರಾತ್ರಿ ಉತ್ಸವ ಕಮೀಟಿಯಿಂದ 9 ದಿನಗಳ ನವರಾತ್ರಿ ಉತ್ಸವದ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಬರ್ಡ್ಸ ತುಕ್ಕಾನಟ್ಟಿ ಹಾಗೂ ಶಿವಬೋಧರಂಗ ಪಿಕೆಪಿಎಸ್, ನಿಸರ್ಗ ಫೌಂಡೇಶನ್ ಮೂಡಲಗಿ ಇವರ ಸಹಯೋಗದೊಂದಿಗೆ ಕೃಷಿ ಮೇಳವನ್ನು ಅಕ್ಟೋಬರ 5, 6, 7 ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ದ್ವಿತೀಯ ಬಾರಿಗೆ ಆಯೋಜಿಸಲಾಗಿದೆ ಎಂದು ಉತ್ಸವ ಕಮೀಟಿಯ ಕೃಷ್ಣಾ ನಾಶಿ ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವರ್ಗಕ್ಕೆ ಉಪಯೋಗವಾಗುಂತ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳು ಪ್ರದರ್ಶನ, ಸಾವಯುವ ಕೃಷಿ, ಸಿರಿಧಾನ್ಯಗಳ ಉತ್ಪಾದನೆ, ವಿಜ್ಞಾನ ವಸ್ತು ಪ್ರದರ್ಶನ, ಶ್ವಾನ ಪ್ರದರ್ಶನ, ಜಾನುವಾರುಗಳ ಪ್ರದರ್ಶನ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕ, ಜೇನು ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೃಷಿ ಮೇಳ ಆಯೋಜಿಸಲಾಗಿದೆ ಎಂದರು.
ಈರಪ್ಪ ಢವಳೇಶ್ವರ ಮಾತನಾಡಿ, ಕೃಷಿ ಮೇಳದಲ್ಲಿ ಉತ್ತಮ ರಾಸುಗಳ ಪ್ರದರ್ಶನ, ಕಿಲಾರಿ ಆಕಳ ಪ್ರದರ್ಶನ, ಟಗರಿನ ಕಾದಾಟ, ರಂಗೋಲಿ ಸ್ಪರ್ಧೆ, ಬಲೂನ್ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಬಾಳೆ ಹಣ್ಣು ತಿನ್ನುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಹಾಗೂ ವಿವಿಧ ಜಿಲ್ಲೆಗಳಿಂದ ರೈತಬಾಂಧವರು ಮೂರು ದಿನದ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ವೀತಿಯ ಕೃಷಿ ಮೇಳವನ್ನು ಯಶಸ್ವಿಯಾಗಿಸಲು ಸಹಕರಿಸಬೇಕೆಂದು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.9590718444, 9008846822ಗೆ ಸಂಪರ್ಕಿಸಿರಿ ಎಂದರು.