ಬೆಂಗಳೂರು- ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳಿಂದ ಹೇಗೆ ಬಚಾವಾಗೋದು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ದಿನಕ್ಕೆ ಒಂದಲ್ಲ ಒಂದು ಕೇಸ್ ಸೈಬರ್ ಕ್ರೈಂ ಗೆ ಈ ರೀತಿಯ ದೂರುಗಳು ಬರುತ್ತಲೇ ಇವೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಇಂಥದ್ದೇ ಪ್ರಕರಣ ದಾಖಲಾಗಿದೆ.
ಆತ ಸಾಲ ಪಡೆಯದೇ ಇದ್ದರೂ ಆತನ ಖಾತೆಗೆ ಬ್ಯಾಂಕ್ ನಿಂದ ಲಕ್ಷ ಲಕ್ಷ ಹಣ ಬಂದಿದೆ. ಬಂದ ಕೆಲವೇ ನಿಮಿಷಗಳಲ್ಲಿ ಸುಮಾರು 8 ಲಕ್ಷ ಹಣ ಹ್ಯಾಕರ್ ಖಾತೆಗೆ ಹೋಗಿದೆ. ಉಳಿದ ಹಣ ಹೋಗೋ ಅಷ್ಟರಲ್ಲಿ ಅವರು ಬುದ್ಧಿವಂತಿಕೆ ಉಪಯೋಗಿಸಿ ಖಾತೆ ಬ್ಲಾಕ್ ಮಾಡಿದ್ದಾರೆ. ಹೀಗಾಗಿ ಉಳಿದ ಹಣ ಹಾಗೇ ಇದೆ. ಇನ್ನು ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.
ಹ್ಯಾಕರ್‌ಗಳು ವ್ಯಕ್ತಿಯ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿದ್ದಾರೆ. ಈ ಮೂಲಕವೇ 23 ಲಕ್ಷ ಲೋನ್ ಪಡೆದಿದ್ದಾರೆ. ಆ ಲೋನ್ ಹಣ ಇವರ ಅಕೌಂಟ್‌ಗೆ ಜಮೆಯಾದ ತಕ್ಷಣವೇ ಸಂಪೂರ್ಣ ಹಣವನ್ನು ತಮ್ಮ ಅಕೌಂಟ್‌ಗೆ ಹಾಕಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಈ ಪ್ರಕರಣವನ್ನು ಪೊಲೀಸರು ಸ್ಮಾರ್ಟ್‌ಫೋನ್ ಮಿರರ್ ಹ್ಯಾಕಿಂಗ್ ಎಂದು ಊಹಿಸಿದ್ದಾರೆ. ಸದ್ಯ ಈ ಸಾಲದ ಮೊತ್ತ 23 ಲಕ್ಷವನ್ನು ಆ ವ್ಯಕ್ತಿಯೇ ತೀರಿಸಬೇಕಿದೆ.