ಬೆಳಗಾವಿ, ೨: ಬೆಳಗಾವಿ ಮತ್ತು ಅದರ ಸುತ್ತಮುತ್ತಲ ಜಿಲ್ಲೆಗಳಿಗೆ ಯಶಸ್ವಿ ಆರೋಗ್ಯಸೇವೆ ಒದಗಿಸುತ್ತಿರುವ ಅರಿಹಂತ ಆಸ್ಪತ್ರೆಯನ್ನು ಕೆಲವೇ ವಿಭಾಗಗಳಿಗೆ ಸೀಮಿತಗೊಳಿಸದೇ ಒಂದೇ ಸೂರಿನಡಿ ರೋಗಿಗಳಿಗೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಅತ್ಯಾಧುನಿಕ ಎಂಡೋಸ್ಕೋಪಿ ವಿಭಾಗವನ್ನು ಈಗ ಪ್ರಾರಂಭಿಸಲಾಗಿದೆ ಎಂದು ಕರ್ನಾಟಕದ ಹಿರಿಯ ಗ್ಯಾಸ್ಟ್ರೋ ಎಂಟರಾಲಜಿಸ್ಟ ನರೇಶ ಭಟ್ ಹೇಳಿದರು.
ಬೆಳಗಾವಿ ನಗರದ ಪ್ರತಿಷ್ಠಿತ ಅರಿಹಂತ ಆಸ್ಪತ್ರೆಯಲ್ಲಿ ನೂತನ ಆಧುನಿಕ ಎಂಡೋಸ್ಕೋಪಿ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದು ಖಂಡಿತವಾಗಿಯೂ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅರಿಹಂತ ಆಸ್ಪತ್ರೆಯ ನೂತನ ಎಂಡೋಸ್ಕೋಪಿ ವಿಭಾಗವನ್ನು ಉದ್ಘಾಟಿಸಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಖ್ಯಾತ ವೈದ್ಯ ಡಾ. ಎಂ. ಡಿ. ದೀಕ್ಷಿತ ಅವರ ರೋಗಿಗಳ ಸಮರ್ಪಣಾಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅರಿಹಂತ ಆಸ್ಪತ್ರೆಯು ಈ ಭಾಗದ ರೋಗಿಗಳಿಗೆ ವರದಾನವಾಗುತ್ತಿದ್ದು, ಮುಖ್ಯವಾಗಿ ಬಡರೋಗಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೇವಲ 15 ತಿಂಗಳ ಆಸ್ಪತ್ರೆ ಇಷ್ಟು ಜನಪ್ರಿಯತೆ ಗಳಿಸಿರುವುದು ಶ್ಲಾಘನೀಯ ಎಂದು ನರೇಶ ಭಟ್ ನುಡಿದರು.
ಆಧುನಿಕ ಎಂಡೋಸ್ಕೋಪಿ ವಿಭಾಗದ ಪ್ರಗತಿಗೆ ಡಾ. ವರದರಾಜ ಗೋಕಾಕ ನೇತೃತ್ವದಲ್ಲಿ ನೂತನ ವಿಭಾಗ ಆರಂಭಿಸಲಾಗಿದೆ. ಡಾ. ವರದರಾಜ ಗೋಕಾಕ ಅವರ ನೇತೃತ್ವದಲ್ಲಿ ಅರಿಹಂತ ಆಸ್ಪತ್ರೆಯು ಶೀಘ್ರದಲ್ಲಿಯೇ ಎಲ್ಲ ಗ್ಯಾಸ್ಟ್ರೋ ವಿಭಾಗದ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಡಾ. ಗೋಕಾಕ ಅವರ ಪರಿಣತಿ ಹಾಗೂ ಅತ್ಯಾಧುನಿಕ ಸಲಕರಣೆ. ಸೌಲಭ್ಯಗಳಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ಅಧ್ಯಕ್ಷರಾದ ಸಹಕಾರರತ್ನ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ್ ಪಾಟೀಲ, ಸಹಕಾರರತ್ನ ಉತ್ತಮ ಪಾಟೀಲ ಮತ್ತು ಉತ್ತರ ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಎಂ.ಡಿ. ದೀಕ್ಷಿತ ಶುಭ ಹಾರೈಸಿದರು.
ಡಾ. ವರದರಾಜ ಗೋಕಾಕ ಅವರ ನೇತೃತ್ವದಲ್ಲಿ ಆರಂಭವಾದ ಈ ಆಧುನಿಕ ಎಂಡೋಸ್ಕೋಪಿ ವಿಭಾಗವು ಹೊಟ್ಟೆಯ ಅಸ್ವಸ್ಥತೆ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಗ್ನೋಸ್ಟಿಕ್ವಿಡಿಯೋ ಎಂಡೋಸ್ಕೋಪಿ, ಥೆರಪಿಟಿಕ್ ವಿಡಿಯೋ ಎಂಡೋಸ್ಕೋಪಿ, ಡೇಕೇರ ವಿಡಿಯೋ ಎಂಡೋಸ್ಕೋಪಿ ಮುಂತಾದ ಸೌಲಭ್ಯಗಳನ್ನು ಒದಗಿಸಲಿದೆ. ಡಾ. ವರದರಾಜ ಗೋಕಾಕ ಅವರು ಪ್ರಸಿದ್ಧ ಗ್ಯಾಸ್ಟ್ರೋ ಎಂಟರಾಲಾಜಿಸ್ಟ ಆಗಿದ್ದಾರೆ. ಡಾ. ವರದರಾಜ ಗೋಕಾಕ ಅವರು 15 ವರ್ಷಗಳಿಂದ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಕರುಳು, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು, ಯಕೃತ್ತಿನ ರೋಗಗಳು, ಪ್ಯಾಂಕ್ರಿಯಾಟೈಟಿಸ್, ಕೊಲೊನೋಸ್ಕೋಪಿ, ಇಆರಪಿಸಿ, ಡೈಲೇಶನ್, ರೋಗಿಗಳಿಗೆ ಅನ್ನನಾಳ/ಕೊಲೊನಿಕ್ಸ್ಟೆಂಟಿಂಗ್ ಇತ್ಯಾದಿ ಚಿಕಿತ್ಸೆ ನೀಡುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆಯನ್ನು ನೀಡುವಲ್ಲಿ ಅವರು ಪರಿಣಿತರು. ಹೆಪಟೈಟಿಸ್ ಬಿ ಮತ್ತು ಸಿರೋಗಿಗಳ ಚಿಕಿತ್ಸೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಈಗ ಡಾ. ವರದರಾಜ ಗೋಕಾಕ ಅವರ ನೇತೃತ್ವದಲ್ಲಿ ಅರಿಹಂತ ಆಸ್ಪತ್ರೆಯಲ್ಲಿ ನೂತನ ಎಂಡೋಸ್ಕೋಪಿ ವಿಭಾಗ ಆರಂಭಿಸಲಾಗಿದ್ದು, ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದೆಲ್ಲ ವರದಾನವಾಗಲಿದೆ.
ಈ ಸಂದರ್ಭದಲ್ಲಿ ಡಾ. ಸುಹಾಸ ಕಲಘಟಗಿ, ಡಾ. ಪ್ರಭು ಹಲಕಟ್ಟಿ, ಡಾ. ಲೋಕನಾಥ ಮದಗನ್ನವರ, ಡಾ. ಅಭಿಷೇಕ ಜೋಶಿ, ಡಾ. ಪ್ರಶಾಂತ ಎಂ. ಬಿ., ಡಾ. ಅವಿನಾಶ ಲೋಂಧೆ, ಡಾ. ಸೂರಜ ಪಾಟೀಲ, ಡಾ. ಯುವರಾಜ ಯಡ್ರಾವಿ, ಡಾ. ಅಮಿತ ಮುಂಗರವಾಡಿ, ಡಾ. ಅಭಿಷೇಕ ಮುಂಗರವಾಡಿ, ಡಾ. ವಿಜಯ ಪಾಟೀಲ, ಮಲ್ಲೇಶ ಯಡ್ಡಿ ಸೇರಿದಂತೆ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.