ಬೆಳಗಾವಿ: ನಗರದ ಗಾಲ್ಫ ಮೈದಾನದಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆ ಕಾರ್ಯಾಚರಣೆ 20ನೇ ದಿನಕ್ಕೆ ಕಾಲಿಟ್ಟಿದೆ. ಚಿರತೆ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿರತೆ ಹಿಡಿಯಲು ಹಂದಿ ಹಿಡಿಯುವ ಬಲೆ ಬಳಕೆ ಮಾಡಲಾಗುತ್ತಿದೆ.
ಗಾಲ್ಫ ಮೈದಾನಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಅವರು ಕ್ಷೇತ್ರದ ಹಂದಿ ಹಿಡಿಯುವ ಜನರನ್ನು ಕಳಿಸಿದ್ದು, ಸಚಿವ ಉಮೇಶ ಕತ್ತಿ ಸೂಚನೆ ಮೇರೆಗೆ ಆಗಮಿಸಿದ್ದೇವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.