ಮೂಡಲಗಿ, ೮- ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ, ಮೂಡಲಗಿ ಮತ್ತು ಖಾನಟ್ಟಿ ಗ್ರಾಮದ ಹೊಲಗಳಲ್ಲಿ ಮಂಗಳವಾರ ಚಿರತೆ ಪತ್ತೆಯಾಗಿದೆ.
ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡು ಬಂದಿದೆ. ಅಲ್ಲದೇ ಹೊಲಗಳ ಹಸಿ ನೆಲದ ಮೇಲೂ ಅದರ ಹೆಜ್ಜೆ ಗುರುತು ಮೂಡಿದ್ದು ಕಂಡು ಬಂದಿದೆ.
ಚಿರತೆ ಹಿಡಿಯುವ ಕುರಿತು ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ನಾಳೆ ಬುಧವಾರದಿಂದ ಕಾರ್ಯಾಚರಣೆ ಆರಂಭಿಸಲಿದೆ.
ಚಿರತೆ ಹೊಲಗಳಲ್ಲಿ ಬೆಳೆದು ನಿಂತಿರುವ ಪೈರಿನಲ್ಲಿರುವ ಸಾಧ್ಯತೆಯಿರುವುದರಿಂದ ನಾಗರಿಕರು ಅದರಲ್ಲೂ ರೈತರು ಎಚ್ಚರಿಕೆಯಾಗಿರಬೇಕೆಂದು ಅರಣ್ಯ ಇಲಾಖೆ ವಿನಂತಿಸಿಕೊಂಡಿದೆ.