ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್ ನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ರಾಜ್ಯದ ಹಲವು ಕಡೆ ಲೋಕಾಯುಕ್ತ ತಂಡ ಧಿಡೀರ್ ದಾಳಿ ನಡೆಸಿದೆ. ಕಲಬುರಗಿ, ಬೀದರ್, ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಅಧಿಕಾರಿಗಳು ಬೀದರನ ಹುಮ್ನಾಬಾದ, ಬೆಂಗಳೂರಿನ ಅತ್ತಿಬೆಲೆ ಆರ್ ಟಿ ಓ ಚೆಕ್ ಪೋಸ್ಟ್ ಗಳ ಮೇಲೆ ಸಹ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.