ಹುಕ್ಕೇರಿ, ೧೨- ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿ ಬದಿಯಿರುವ ಹಿಟ್ನಿ ಕ್ರಾಸ್ ಹತ್ತಿರದ ಢಾಬಾ ಆವರಣದಲ್ಲಿ ಹೊಸ ಕಾರುಗಳನ್ನು ಹೊತ್ತು ನಿಂತಿದ್ದ ಎರಡು ಲಾರಿಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿವೆ. ಅವುಗಳಲ್ಲಿದ್ದ ಕಾರುಗಳೂ ಸುಟ್ಟು ಭಸ್ಮವಾಗಿವೆ.
ಕಾರುಗಳನ್ನು ಉತ್ಪಾದನಾ ಸ್ಥಳದಿಂದ ವಿತರಿಕರಿಗೆ ಸಾಗಿಸುತ್ತಿದ್ದ ಲಾರಿ ಚಾಲಕರು ಹೆದ್ದಾರಿ ಬದಿಯ ಢಾಬಾವೊಂದರ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಿ ಉಪಹಾರಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಲಾರಿಗಳಲ್ಲಿ ಎಷ್ಟು ಹೊಸ ಕಾರ್ ಗಳಿದ್ದವು, ಯಾವ ಸ್ಥಳಕ್ಕೆ ಸಾಗಿಸಲಾಗುತ್ತಿತ್ತು ಎನ್ನುವುದು ತಿಳಿದು ಬಂದಿಲ್ಲ.
ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.