ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ನಡೆದಿರುವುದು ಸಾಬೀತಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಶಿಕ್ಷಕನ ಕೃತ್ಯ ಬಯಲಾಗಿದೆ.
ಟ್ಯೂಷನ್ ಗೆ ಕರೆಸಿಕೊಂಡಿದ್ದ ಆರೋಪಿ ಕಾಂತರಾಜು ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ. ಬಾಲಕಿಯ ಪೋಷಕರಿಗೆ ಕೃತ್ಯದ ಬಗ್ಗೆ ಗೊತ್ತಾದರೆ ಅಪಾಯವೆಂದರಿತು ತಲೆಗೆ ರಾಡ್ ನಿಂದ ಹೊಡೆದು ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಐಪಿಸಿ 302 ಹಾಗೂ ಪೋಕ್ಸೋ ಕಾಯ್ದೆ ಅಡಿ ಆರೋಪಿ ಕಾಂತರಾಜನನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.