ರಾಯಬಾಗ : ಫೆಬ್ರವರಿ 4ರಂದು ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸೌಂದತ್ತಿಯಲ್ಲಿ ನಡೆದಿದ್ದ ಎಟಿಎಂ ಕಳ್ಳತನದ ಯತ್ನಿಸಿದ್ದ ವ್ಯಕ್ತಿಯನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.
ರಾಯಬಾಗ ಪಟ್ಟಣದ 25 ವರ್ಷದ ಖಾಜಾಸಾಬ ಬಾಬಾಸಾಬ ಮುಜಾವರ ಬಾವನ ಸೌಂದತ್ತಿ ಗ್ರಾಮದಲ್ಲಿ ಬಾಗಿಲು ಹಾಕಲಾಗಿದ್ದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದ ಶೆಟರ್ ಮುರಿದು ಒಳ ಪ್ರವೇಶಿಸಿ ಹಣ ದೋಚಲು ಯತ್ನಿಸಿ ಪರಾರಿಯಾಗಿದ್ದನು.
ಘಟನೆ ಬಳಿಕ ಎಟಿಎಂ ಕೇಂದ್ರದ ಹೊರಗಿದ್ದ ಸಿಸಿ ಕ್ಯಾಮೆರಾ ದೃಶ್ಯಗಳಿಂದ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ಗುರುತಿಸಿ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಪರಾರಿಯಾಗಿದ್ದ ಕಳ್ಳ ಈಗ ಸಿಕ್ಕಿಬಿದ್ದಿದ್ದಾನೆ.