ಮಂಗಳೂರು : ಮಂಗಳೂರಿನ ಮೊದಲ ಆಟೋ ಚಾಲಕ ಎಂಬ ಹೆಗ್ಗಳಿಕೆ ಹೊಂದಿದ್ದ ಮೋಂತು ಲೋಬೊ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಲೋಬೊ ಮೃತಪಟ್ಟಿದ್ದಾರೆ.
1955ರಲ್ಲಿ ಆಟೋ ಚಾಲನೆ ಆರಂಭಿಸಿದ ಇವರು, 66 ವರ್ಷಗಳ ಸುದೀರ್ಘ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಘಾತ ಎಸಗಿಲ್ಲ.
ಅಲ್ಲದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೂ ಇವರಿಗಿಲ್ಲ. ಜೊತೆಗೆ ಗರ್ಭಿಣಿಯರಿಗೆ ಇವರ ಆಟೋದಲ್ಲಿ ಉಚಿತ ಸಂಚಾರ ಸೇವೆ ಸಿಗುತ್ತಿತ್ತು. ಮೋಂತು ಲೋಬೋ ಅವರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.