ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಇನ್ನು ಕೆಲವೇ ದಿನಗಳಲ್ಲಿ ವರ್ಷ ಪೂರೈಸುತ್ತದೆ. ಆದರೆ ಮತದಾರರು ಆಯ್ಕೆ ಮಾಡಿದ ಸದಸ್ಯರು ತಮಗೆ ದೊರೆತ ಅಧಿಕಾರಕ್ಕೆ ಸರಕಾರ ಇನ್ನೂ ಅನುಮತಿ ಕೊಡದಿರುವದಕ್ಕೆ ಬೆಳಗಾವಿ ನಗರದ ಬಿಜೆಪಿ ಶಾಸಕರಾದ ಅನಿಲ ಬೆನಕೆ ಮತ್ತು ಅಭಯ ಪಾಟೀಲ ಅವರೇ ಕಾರಣವೆಂದು ಬಹಿರಂಗವಾಗಿ ಆರೋಪಿಸುತ್ತಿದ್ದುದರಿಂದ ಕಾಂಗ್ರೆಸ್ ನಾಯಕರು ಇವರೇ ನಮ್ಮ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಎಂದು ಘೋಷಿಸಿ ಮಹಾಪೌರರು ಧರಿಸುವ ಗೌನ್ ಸಿದ್ದ ಪಡಿಸಿದ್ದಾರೆ.
ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯೊಬ್ಬರು ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆಯವರಿಗೆ ಮಹಾಪೌರರು ಧರಿಸುವ ಗೌನ್ ಗಳನ್ನು ಸಿದ್ದಪಡಿಸಿದ್ದು, ಅವರಿಗೆ ಹೊದಿಸಿ ಗೌರವಿಸಲು ನಿರ್ಧರಿಸಿದೆ. ಸಿದ್ದ ಪಡಿಸಿರುವ ಗೌನ್ ಗಳು ಯುವತಿಯರು ಧರಿಸುವ ಸ್ಕರ್ಟ ಮಾದರಿಯಾಗಿವೆ.
ಎರಡು ದಿನಗಳಲ್ಲಿ ಇಬ್ಬರೂ ಶಾಸಕರು ದೊರೆಯದಿದ್ದರೆ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಆ ಶಾಸಕರ ಭಾವಚಿತ್ರವನ್ನು ಮುಖಕ್ಕೆ ಹಚ್ಚಿ ಗೌನ್ ತೊಡಿಸಿ ಇವರು ನಮ್ಮ ಬೆಳಗಾವಿಯ ಪ್ರಥಮ ಮತ್ತು ದ್ವಿತೀಯ ಪ್ರಜೆಗಳು ಎಂದು ಸಾರಲು ತೀರ್ಮಾನಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಇನ್ನು ಕೆಲವೇ ದಿನಗಳಲ್ಲಿ ಒಂದು ವರ್ಷ ಪೂರೈಸುತ್ತದೆ. ಆದರೆ ಮತದಾರರು ಆಯ್ಕೆ ಮಾಡಿದ ಸದಸ್ಯರು ತಮಗೆ ಸಂವಿಧಾನಬದ್ಧವಾಗಿ ದೊರೆತ ಅಧಿಕಾರಕ್ಕೆ ಸರಕಾರ ಇನ್ನೂ ಅನುಮತಿ ಕೊಡದ ಕಾರಣ ಈ ಮಾದರಿಯ ಪ್ರತಿಭಟನೆಗೆ ಕಾಂಗ್ರೆಸ್ ಸಿದ್ದವಾಗಿದೆ.