ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ತೀವ್ರ ಮುಖಭಂಗಕ್ಕೀಡಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ಮಹಾರಾಷ್ಟ್ರ ಪರ ತನ್ನ ವಾದವನ್ನು ಮುಂದುವರೆಸಿದೆ.
ಸದಸ್ಯರಾಗಿ ಆಯ್ಕೆಯಾದ ನಂತರದ ಮೊದಲ ಸಭೆಯಲ್ಲಿ ಪ್ರತಿಜ್ಞೆ ಸ್ವೀಕಾರ ಮತ್ತು ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆಗೆ ಭಗವಾ ಪೇಠ ಧರಿಸಿ ಬಂದಿದ್ದ ಸಮಿತಿಯ ಇಬ್ಬರೂ ಮತ್ತು ಸಮಿತಿ ಸೇರಿಕೊಂಡಿರುವ ಓರ್ವ ಪಕ್ಷೇತರ ಸದಸ್ಯರು ಪಾಲಿಕೆ ಆವರಣದಲ್ಲಿ ಸಮಿತಿಯ ಸಂಪ್ರದಾಯಕ “ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ, ಬಾಲ್ಕಿ ಸಹ ಸಂಯುಕ್ತ ಮಹಾರಾಷ್ಟ್ರ ಜಾಲಿಚ ಪಾಯಿಜೆ” (ಅಂದರೆ ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇ ಬೇಕು) ಎಂಬ ಘೋಷಣೆ ಕೂಗಿದರು. ಪಾಲಿಕೆಯ ಪ್ರವೇಶಿಸುವದಕ್ಕೂ ಮೊದಲು ಮೆಟ್ಟಿಲುಗಳ ಮೇಲೆ ಮೊಣಕಾಲುರಿ ತಲೆಯನ್ನು ತಗ್ಗಿಸಿ ನಂತರ ಒಳಗೆ ಪ್ರವೇಶಿಸಿದರು.
ಆಯ್ಕೆಯಾಗಿ ಸುಮಾರು 17 ತಿಂಗಳ ನಂತರ ಸದಸ್ಯರಿಗೆ ಅಧಿಕಾರ ಭಾಗ್ಯ ದೊರೆತಿದೆ. ಈ ಅವಧೀಯಲಾದ ಸ್ಮಾರ್ಟ್ ಸಿಟಿ ಸೇರಿದಂತೆ ಪ್ರಮುಖ ಕಾಮಗಾರಿ ಕುರಿತು ಕಮಿಷನರ್ ಬಳಿ ಮಾಹಿತಿ ಪಡೆಯುವದಾಗಿ ಪತ್ರಕರ್ತರಿಗೆ ಅವರು ತಿಳಿಸಿದರು.
ಒಂದೂವರೇ ದಶಕದ ಹಿಂದೆ ಪಾಲಿಕೆಯಲ್ಲಿ ಹಿಡಿತ ಹೊಂದಿದ್ದ ಎಂಇಎಸ್, ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಅಧಿಕಾರ ವಂಚಿತಗೊಂಡು ಕಳೆದ ಚುನಾವಣೆಯಲ್ಲಿ ಇನ್ನಿಲ್ಲದಂತಾಗಿದೆ. ಸ್ಪರ್ಧಿಸಿದ್ದ 58 ಕ್ಷೇತ್ರಗಳಲ್ಲಿ ಕೇವಲ ಎರಡೇ ಸ್ಥಾನ ಗೆದ್ದಿರುವ ಅದಕ್ಕೆ ಪಕ್ಷೇತರರಾಗಿ ಆಯ್ಕೆಯಾಗಿರುವ ಸದಸ್ಯರೊಬ್ಬರು ಸೇರಿಕೊಂಡಿದ್ದಾರೆ. ಈ ಪಕ್ಷೇತರ ಸದಸ್ಯರು ಸಮಿತಿಯ ಸದಸ್ಯರನ್ನೇ ಸೋಲಿಸಿ ಆಯ್ಕೆಯಾದವರು.