ಬೆಂಗಳೂರು : ದ್ವಾಪರ ಯುಗದಲ್ಲಿ ನಮ್ಮ ಸಮಾಜದ ಹಿಂದೆ ಶ್ರೀರಾಮಚಂದ್ರ ನಿಂತಿದ್ದರು. ಕಲಿಯುಗದಲ್ಲಿ ಶ್ರೀರಾಮಚಂದ್ರನಂತೆ ಮುಖ್ಯಮಂತ್ರಿ ಬೊಮ್ಮಾಯಿ ನಿಂತಿದ್ದಾರೆ ಎಂದು ಸಚಿವ ಶ್ರೀರಾಮಲು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ದ್ವಾಪರಯುಗದಲ್ಲಿ ನಮ್ಮ ಸಮಾಜದ ಹಿಂದೆ ಶ್ರೀರಾಮಚಂದ್ರ ನಿಂತಿದ್ದರು. ಕಲಿಯುಗದಲ್ಲಿ ಶ್ರೀರಾಮಚಂದ್ರನಂತೆ ಮುಖ್ಯಮಂತ್ರಿ ಬೊಮ್ಮಾಯಿ ನಿಂತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ನಾನು ಅವತ್ತೇ ಹೇಳಿದ್ದೆ. ಮೀಸಲಾತಿ ಹೆಚ್ಚಳ ಮಾಡುತ್ತೇನೆ ಎಂದು ಅದು ಈಗ ಈಡೇರಿದೆ ಎಂದರು.
ಮೀಸಲಾತಿ ಕೊಡಲು ನಮ್ಮ ಸರ್ಕಾರ ಬರಬೇಕು ಅಂದಿದ್ದೆ. ಆದರೆ ನನ್ನನ್ನು ಕೆಲವರು ಗೇಲಿ ಮಾಡಿದರು. ಆದರೂ ತಾಳ್ಮೆಯಿಂದ ಇದ್ದಿದ್ದಕ್ಕೆ ನಮ್ಮ ಸಮಾಜಕ್ಕೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.