ಬೆಳಗಾವಿ : ಮಂಗಳವಾರ ತಡರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ ಪಟ್ಟ ಹಿರಿಯ ಸಚಿವ ಉಮೇಶ ಕತ್ತಿಯವರ ಅಂತ್ಯ ಸಂಸ್ಕಾರವು ಬೆಲ್ಲದ ಬಾಗೇವಾಡಿಯಲ್ಲಿನ ಅವರ ತೋಟದಲ್ಲಿ ಲಿಂಗಾಯತ ಪದ್ಧತಿಯಂತೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಅನೇಕ ಲಿಂಗಾಯತ ಮಾಠಾಧಿಶರು ಅಂತಿಮ ವಿಧಿ ವಿಧಾನಗಳನ್ನು ವಚನಗಳ ಪಠನದೊಂದಿಗೆ ನೆರವೇರಿಸಿದರು.
ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಶಾಸಕರು ಸೇರಿದಂತೆ ರಾಜ್ಯದ ಎಲ್ಲ ಘಟಾನುಘಟಿ ನಾಯಕರು, ಕತ್ತಿ ಕುಟುಂಬದ ಸದಸ್ಯರು, ಸಂಬಂಧಿಕರು, ಸಾವಿರಾರು ಜನರು ಸಂಸ್ಕಾರದಲ್ಲಿ ಉಪಸ್ಥಿತರಿದ್ದರು.
ಶವ ಸಂಸ್ಕಾರಕ್ಕೆ ಎರಡು ಅಡಿಗಳಷ್ಟು ಕುಣಿ ತೋಡಿದಾಗ ನೆಲದಿಂದ ನೀರು ಬರಲಾರಂಭಿಸಿತು. ಆದರೂ ಸುಮಾರು ಆರು ಅಡಿಗಳಷ್ಟು ಅಗೆದು ನೀರನ್ನು ಪಂಪ್ ಮಾಡಿ ಹೊರಗೆ ತೆಗೆದು ನಂತರ ಸಿದ್ದ ಪಡಿಸಿದ್ದ ಸಿಮೆಂಟ್ ಕಾಂಕ್ರೀಟ್ ಶೀಟ್ ಬಳಸಿ ಕುಣಿಯನ್ನು ಕವರ್ ಮಾಡಿ ನಂತರ ಮಣ್ಣು ಮಾಡಲಾಯಿತು.
ಕತ್ತಿಯವರ ಅಗಲಿಕೆಯಿಂದ ರಾಜ್ಯದಲ್ಲಿ ಬುಧವಾರದಿಂದ ಮೂರು ದಿನ ಶೋಕಾಚರಣೆ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.