ಬೆಳಗಾವಿ : ಕಾಳಿ ಅಂರಾಯಿ, ಕ್ಲಬ್ ರಸ್ತೆ ಹಾಗೂ ಶಿವಾಜಿ ನಗರದ ವಿವಿಧ ಪ್ರದೇಶಗಳಲ್ಲಿ ಲೋಕೊಪಯೋಗಿ ಇಲಾಖೆಯಡಿ 3 ಕೋಟಿಗಳ ವೆಚ್ಚದಲ್ಲಿ ರಸ್ತೆ ಡಾಂಬರಿಕರಣ, ಚರಂಡಿ, ಒಳಚರಂಡಿ, ಪೇವರ್ಸ ಹಾಗೂ ಇತರೆ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ವತಿಯಿಂದ ಕಾಳಿ ಅಂಬರಾಯಿ ಹಾಗೂ ಕ್ಲಬ್ ರಸ್ತೆ ಪ್ರದೇಶದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಹಾಗೂ ಶಿವಾಜಿ ನಗರದ ವಿವಿಧ ಪ್ರದೇಶಗಳಲ್ಲಿ ರೂ. 2.0 ಕೋಟಿಗಳ ವೆಚ್ಚದಲ್ಲಿ ನಗರದಲ್ಲಿ ರಸ್ತೆ, ಚರಂಡಿ, ಒಳಚರಂಡಿ, ಪೇವರ್ಸ ಅಳವಡಿಸುವ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ.
ಕಾಳಿ ಅಮರಾಯಿ ಹಾಗೂ ಕ್ಲಬ್ ರಸ್ತೆ ಪ್ರದೇಶದ ಸ್ಥಳಿಯರು ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಎರಡೂ ಮೂರು ದಿನಗಳಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರಾದ ಶಿವಾಜಿ ಮಂಡೋಳಕರ, ಮಾಡಿವಾಲೆ, ಬಾಬಾಜನ ಮತವಾಲೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸ್ಥಳಿಯರಾದ ಗಜಾನನ ಮಿಸಾಳೆ, ರಾಹುಲ ಖುಡೆ, ಸಂಜಯ ಭಂಡಾರಿ, ವಿಕ್ರಮ ಕಿಲ್ಲೆಕರ, ಆಶೋಕ ಥೋರಾಟ, ವಿಜಯ ಕೋಡಗನೂರ, ರಘು ಉರ್ಬಿನ, ವಿಜಯ ಪವಾರ, ಯಲ್ಲಪ್ಪ ಖಾಂಡೇಕರ, ಗುತ್ತಿಗೆದಾರರಾದ ಎನ್. ಎಸ್. ಚೌಗುಲೆ, ವಿಜಯ ಕುಪಾಟಿ ಹಾಗೂ ಇತರ ಸ್ಥಳೀಯರು ಉಪಸ್ಥಿತರಿದ್ದರು.