ಬೆಳಗಾವಿ : ಲೋಕೊಪಯೋಗಿ ಇಲಾಖೆಯಡಿ 6 ಕೋಟಿ 50 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಲೋಕೋಪಯೋಗಿ ಇಲಾಖೆಯ ವತಿಯಿಂದ ಕ್ಯಾಂಪ ಪ್ರದೇಶದ ವಿವಿಧ ಕಡೆಗಳಲ್ಲಿ, ಖಡಕ್ ಗಲ್ಲಿ, ಇಂದಿರಾ ಕಾಲೋನಿ, ಬಡಕಲ ಗಲ್ಲಿ, ಶೆಟ್ಟಿ ಗಲ್ಲಿ, ಚವ್ವಾಟ ಗಲ್ಲಿ, ಉಜ್ವಲ ನಗರ, ಹೊಸ ಗಾಂದಿ ನಗರ ಹಾಗೂ ಬಸವನಕುಡಚಿಯ ನಾಗದೇವ ಗಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ, ಸಿ.ಡಿ, ಒಳಚರಂಡಿ, ಪೇವರ್ಸ ಹಾಗೂ ಇತರ ಅಭಿವೃಧ್ಧಿ ಕಾಮಗಾರಿಗಳನ್ನು 6 ಕೋಟಿ 50 ಲಕ್ಷಗಳ ವೆಚ್ಚಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನರೇಂದ್ರ ಬೋಗೆ, ಸುರೇಶ ಶಿಂತ್ರೆ, ಜ್ಯೋತಿ ಶಿಂತ್ರೆ, ಮಹಿಳಾ ಮಂಡಳ ಸದಸ್ಯರು, ದಿನೇಶ ಶಿರೋಳಕರ, ಅಶೋಕ ಥೋರಾಟ, ಪ್ರದೀಪ ತಾಂಜಿ, ವಿಜಯ ಭದ್ರಾ, ಸಾಜೀದ ಶೇಖ, ರಾಹುಲ್ ಜಾಧವ, ವಿಶ್ವಜೀತ ಚೌಗುಲೆ, ಸಂಜಯ ಜಾಧವ, ಖಡಕ ಗಲ್ಲಿ ಮಹಿಳಾ ಮಂಡಳ ಸದಸ್ಯರು, ಸಂದೀಪ ಮೋಹಿತೆ, ಪವನ ಕಿಲ್ಲೇಕರ, ರೋಹನ ಜಾಧವ, ಚವ್ವಾಟ ಗಲ್ಲಿಯ ಪಮಚ ಕಮೀಟಿ ಸದಸ್ಯರು, ಶೆಟ್ಟಿ ಗಲ್ಲಿಯ ಕಿತ್ತೂರು ರಾಣ ಚೆನ್ನಮ್ಮ ಮಂಡಳ ಸದಸ್ಯರು, ನಗರ ಸೇವಕ ಬಸವರಾಜ ಮೋದಗೇಕರ ಮತ್ತು ಬಸವಣಕುಡಚಿ ಸ್ಥಳಿಯರು ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ದ್ಯಾಮನ್ನವರ, ಗುತ್ತಿಗೆದಾರ ಎನ್. ಎಸ್. ಚೌಗುಲೆ ಉಪಸ್ಥಿತರಿದ್ದರು.