ಮುಂಬೈ : ಮಹಾರಾಷ್ಟ್ರದ ಯವತಮಾಲ್ ಜಿಲ್ಲೆಯ ಪುಸಾದ್ ತಾಲೂಕಿನ ಹಳ್ಳಿಯೊಂದರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ.
ಪುಸಾದ್ ತಾಲೂಕಿನ ಬನ್ಸಿ ಗ್ರಾಮಸ್ಥರು ಸೇರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಆನ್ಲೈನ್ ಶಿಕ್ಷಣಕ್ಕಾಗಿ ಮಕ್ಕಳು ಮೊಬೈಲ್ ಫೋನ್ ಬಳಸಲು ಪ್ರಾರಂಭಿಸಿದ್ದರು.
ಈಗ ಮೊಬೈಲ್ ನೋಡುವುದು ಅತಿಯಾಗಿದೆ. ವಿವಿಧ ವೆಬಸೈಟ್ ವೀಕ್ಷಿಸುವುದು ಮತ್ತು ಆನಲೈನ್ ಆಟಗಳನ್ನು ಆಡುತ್ತಾ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಶೀಘ್ರದಲ್ಲೇ ಮೊಬೈಲ್ ವ್ಯಸನಿಗಳಾಗುತ್ತಾರೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮದ ಸರಪಂಚ್ ಗಜಾನನ ಟೆಲಿ ತಿಳಿಸಿದ್ದಾರೆ.
ಮೊಬೈಲ್ ಅತಿಯಾದ ಬಳಕೆಯನ್ನು ತಪ್ಪಿಸಲು ಈ ಕ್ರಮ ಸೂಕ್ತ. ಆರಂಭದಲ್ಲಿ ಸಮಸ್ಯೆ ಉಂಟಾಗಬಹುದು. ಈ ಕುರಿತು ಪೋಷಕರು ಮತ್ತು ಮಕ್ಕಳಿಬ್ಬರಿಗೂ ಸಲಹೆ ನೀಡಲಾಗುವುದು. ಕೌನ್ಸೆಲಿಂಗ್ ಮಾಡಿದ ನಂತರವೂ ಮಕ್ಕಳು ಮೊಬೈಲ್ ಬಳಸುವುದು ಕಂಡು ಬಂದರೆ ನಾವು ದಂಡ ವಿಧಿಸುತ್ತೇವೆ. ಮಕ್ಕಳು ಮತ್ತೆ ಅಧ್ಯಯನಕ್ಕೆ ಹೋಗುವಂತೆ ಮಾಡುವುದು ಹಾಗೂ ಮೊಬೈಲ್ ಫೋನ್ಗಳಿಗೆ ಅಂಟಿಕೊಂಡು ವಿಚಲಿತರಾಗದಂತೆ ಮಾಡುವುದು ಇದರ ಉದ್ದೇಶ ಎಂದು ಹೇಳಿದರು.
ಈ ವರ್ಷದ ಸ್ವಾತಂತ್ರ್ಯ ದಿನದಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತ್ಯಂಚೆ ವಡಗಾಂವ ಗ್ರಾಮದಲ್ಲಿಯೂ ಸಹ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿತ್ತು.