ಅಥಣಿ, ೧೧- : ಮೂವರು ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಥಣಿ ಸಮೀಪದ ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಬಿಳ್ಳೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಹಾಗೂ ಮೂವರು ಮಕ್ಕಳ ಶವ ಬಿಳ್ಳೂರು ಗ್ರಾಮದ ಹೊರ ವಲಯ ತೋಟದ ಬಾವಿಯೊಂದರಲ್ಲಿ ಪತ್ತೆಯಾಗಿವೆ.
ಸಂಗೀತಾ ತುಕಾರಾಮ ಮಾಳಿ (27), ಅಮೃತಾ, ಅಂಕಿತಾ ಹಾಗೂ ಐಶ್ವರ್ಯ ಮೃತಪಟ್ಟವರು.
ಮೃತರು ಅಥಣಿ ಜತ್ತ ರಸ್ತೆಯ ಬಿಳ್ಳೂರು ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದರು. 3 ದಿನಗಳ ಹಿಂದೆ ತಾಯಿ ಮಕ್ಕಳು ಕಾಣೆಯಾಗಿದ್ದರು ಎಂದು ಪತಿ ತುಕಾರಾಮ ದೂರು ನೀಡಿದ್ದರು.