ತಮ್ಮ ಪುಟ್ಟ ಕಣ್ಣುಗಳು ಹಾಗು ಹಾಸ್ಯಪ್ರಜ್ಞೆಯಿಂದ ಗಮನಸೆಳೆಯುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ.
ಈ ಬಾರಿ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಡ್ಯಾನ್ಸ್ ವಿಡಿಯೋದಿಂದಾಗಿ ಟ್ರೆಂಡಿಂಗ್ ಆಗಿದ್ದಾರೆ. ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ಮಗಳ ಮದುವೆಯಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ನೃತ್ಯ ಪ್ರದರ್ಶಿಸಿದ್ದಾರೆ.
ಸಂಗೀತಕ್ಕೆ ತಕ್ಕಂತೆ ಕುಣಿದಿರುವ ಅವರ ನೃತ್ಯ ಹಲವರ ಹೃದಯ ಗೆದ್ದಿದೆ. ಪದಗಳಲ್ಲಿ ಹೇಳಲಾಗದ್ದನ್ನು ಶರೀರ ಹೇಳುತ್ತದೆ ಎಂದು ತಮ್ಮ ನೃತ್ಯದ ವಿಡಿಯೋ ಹಂಚಿಕೊಂಡಿರುವ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ , ನಾನು ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೊ ಅವರ ಮಗಳ ಮದುವೆಯಲ್ಲಿ ನೃತ್ಯ ಮಾಡಿದ್ದೇನೆ ಎಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನಾಗಾಲ್ಯಾಂಡ್ ಸಚಿವರ ಪ್ರತಿಭೆಯಿಂದ ಟ್ವಿಟರ್ ಬಳಕೆದಾರರು ಪ್ರಭಾವಿತರಾಗಿದ್ದು, ವಿಡಿಯೋ ಲಕ್ಷಾಂತರ ವೀಕ್ಷಣೆ ಗಳಿಸಿದೆ.
ಅವರ ಅನುಯಾಯಿಗಳು ಮತ್ತು ಇತರ ಟ್ವಿಟರ್ ಬಳಕೆದಾರರು ಅವರ ಪೋಸ್ಟ್ಗೆ ಸುಂದರವಾದ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ.
“ಬ್ಯೂಟಿಫುಲ್ ಡ್ಯಾನ್ಸ್ ಸರ್” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. “ನೀವು ಅದ್ಭುತ, ಉತ್ಸಾಹಭರಿತ ವ್ಯಕ್ತಿ ಮತ್ತು ಹೃದಯಗಳನ್ನು ಗೆಲ್ಲುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ. ನಮ್ಮ ಈಶಾನ್ಯ ರಾಜ್ಯದ ಜನರನ್ನು ಗೇಲಿ ಮಾಡುವುದನ್ನು ನಿಲ್ಲಿಸಲು ನಿಮ್ಮ ಶೈಲಿ ಸಾಕು. ಜೈ ಹಿಂದ್” ಎಂದು ಮತ್ತೊಬ್ಬರು ಹೇಳಿದ್ದಾರೆ.
ಟೆಮ್ಜೆನ್ ಇಮ್ನಾ ಅಲೋಂಗ್ ಅವರು ತಮ್ಮ ತವರು ರಾಜ್ಯದ ಸುಂದರ ಸಂಸ್ಕೃತಿಯನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ.
The body says what words cannot. 😬
माननीय मुख्यमंत्री श्री नेफियू रियो जी, की बेटी के शादी में मैंने भी दो स्टेप्स लगा दिया 🕺 pic.twitter.com/QjtecDGxjD
— Temjen Imna Along (@AlongImna) November 13, 2022