ನವಜೋತ ಸಿಂಗ್‌ ಸಿಧು ನಾಳೆ ಜೈಲಿನಿಂದ ಬಿಡುಗಡೆ

A B Dharwadkar
ನವಜೋತ ಸಿಂಗ್‌ ಸಿಧು ನಾಳೆ ಜೈಲಿನಿಂದ ಬಿಡುಗಡೆ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಹೊಸದಿಲ್ಲಿ: 34 ವರ್ಷ ಹಳೆಯ ಹಲ್ಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ ಹೆಸರಾಂತ ಕ್ರಿಕೆಟ್‌ ಆಟಗಾರ ಮತ್ತು ಪಂಜಾಬ್ಕಾಂಗ್ರೆಸ್ಮಾಜಿ ಮುಖ್ಯಸ್ಥ ನವಜೋತ ಸಿಂಗ್ ಸಿಧು ಅವರು ಎಪ್ರಿಲ್‌ 1ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

34 ವರ್ಷಗಳ ಹಿಂದೆ 65 ವರ್ಷ ವಯಸ್ಸಿನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 2022 ಮೇ 19ರಂದು ಸುಪ್ರೀಮ ಕೋರ್ಟ ವಿಚಾರಣೆ ನಡೆಸಿತ್ತು. 2018 ತೀರ್ಪಿನಲ್ಲಿ ಲೋಪವಾಗಿದೆ ಎಂಬುದು ದಾಖಲೆಗಳನ್ನು ನೋಡಿದರೇ ತಿಳಿಯುತ್ತದೆ ಮತ್ತು ಲೋಪವನ್ನು ಸರಿಪಡಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲಕರ ಮತ್ತು ಸಂಜಯ ಕಿಶನ ಕೌಲ್ಅವರ ಪೀಠವು ಹೇಳಿತ್ತು. ಆಗ ಸಿಧು ಅವರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿತ್ತು.

ಸಿಧು ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ಆಟಗಾರ. ಎತ್ತರದ ದಷ್ಟಪುಷ್ಟ ವ್ಯಕ್ತಿ. ತಮಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಗೆ ತಮ್ಮ ಕೈಯಿಂದ ಹೊಡೆದರೆ ಎಷ್ಟು ಜೋರಾಗಿ ಏಟು ಬೀಳಬಹುದು ಎಂಬುದೆಲ್ಲ ಸಿಧು ಅವರಿಗೆ ತಿಳಿದಿತ್ತು ಎಂಬ ವಿಚಾರವನ್ನು ಕೋರ್ಟ ಆಗ ನಿರ್ಲಕ್ಷಿಸಿತ್ತು ಎಂದು ಪೀಠ ವಿವರಿಸಿತ್ತು.

ಕುಸ್ತಿಪಟು ಅಥವಾ ಕ್ರೆಕೆಟಿಗ ಅಥವಾ ಅತ್ಯಂತ ದಷ್ಟಪುಷ್ಟವಾದ ವ್ಯಕ್ತಿಯು ತಮ್ಮ ಕೈಯನ್ನು ಹೊಡೆಯುವುದಕ್ಕೆ ಬಳಸಿದರೆ, ಕೈಯನ್ನು ಒಂದು ಆಯುಧ ಎಂದೇ ಪರಿಗಣಿಸಬಹುದು ಎಂದು ಕೋರ್ಟ ತಿಳಿಸಿತ್ತು.ಅಂದಿನ ಸನ್ನಿವೇಶದಲ್ಲಿ ಸಂಯಮ ಕಳೆದುಹೋಗಿರಬಹುದು. ಆದರೆ, ಸಂಯಮ ಕಳೆದು ಹೋದುದರ ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ ಎಂದೂ ಪೀಠವು ಹೇಳಿತ್ತು.

ಸಿಧು ಮತ್ತು ಅವರ ಗೆಳೆಯ ರೂಪಿಂದರ್ ಸಿಂಗ್ಸಂಧು ಅವರು ಪಟಿಯಾಲಾದಲ್ಲಿ 1988 ಡಿಸೆಂಬರ್‌ 27ರಂದು ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಜಿಪ್ಸಿಯಲ್ಲಿ ಕುಳಿತಿದ್ದರು. ಸಂದರ್ಭದಲ್ಲಿ ಗುರ್ನಾಮ ಸಿಂಗ್ಮತ್ತು ಇತರ ಇಬ್ಬರು ಕಾರಿನಲ್ಲಿ ಅಲ್ಲಿಗೆ ಬಂದರು. ರಸ್ತೆ ಮಧ್ಯದಿಂದ ಜಿಪ್ಸಿ ತೆಗೆಯುವಂತೆ ಸಿಧು ಮತ್ತು ಸಂಧು ಅವರನ್ನು ಗುರ್ನಾಮ ಕೇಳಿದ್ದರು. ಇದರಿಂದ ವಾಗ್ವಾದ ನಡೆದು ಸಿಧು ಅವರು ಗುರ್ನಾಮ್ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಗುರ್ನಾಮ್ಸಿಂಗ್ಅವರು ಆಸ್ಪತ್ರೆಯಲ್ಲಿ ಅನಂತರ ಮೃತಪಟ್ಟರು. ಪಟಿಯಾಲದ ಸೆಷನ್ಸ್ನ್ಯಾಯಾಲಯವು ಸಿಧು ಅವರನ್ನು 1999ರಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪಂಜಾಬ್‌–ಹರಿಯಾಣ ಹೈಕೋರ್ಟ, ಸಿಧು ಅವರಿಗೆ 2006ರಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿತ್ತು.

ಸಿಧು ಅವರು ಸುಪ್ರೀಮ ಕೋರ್ಟಗೆ 2018ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣವು 30 ವರ್ಷ ಹಳೆಯದು ಮತ್ತು ಸಿಧು ಅವರು ಆಯುಧವನ್ನೇನೂ ಬಳಸಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ, ಶಿಕ್ಷೆಯನ್ನು ರದ್ದು ಮಾಡಿತು. ₹1,000 ದಂಡವನ್ನು ಮಾತ್ರ ವಿಧಿಸಿತು. ಆದೇಶವನ್ನು ಮರುಪರಿಶೀಲಿಸಬೇಕು ಮತ್ತು ಸಿಧು ಅವರ ವಿರುದ್ಧ ಹೆಚ್ಚು ಗುರುತರವಾದ ಆರೋಪಗಳನ್ನು ಹೊರಿಸಬೇಕು ಎಂದು ಗುರ್ನಾಮ್ಅವರ ಕುಟುಂಬವು ಸುಪ್ರೀಮ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಸಿಧು ವಿರೋಧಿಸಿದ್ದರು. ಅದೇ ಅರ್ಜಿಯ ಆಧಾರದಲ್ಲಿ ಸಿಧು ಅವರಿಗೆ ಶಿಕ್ಷೆಯಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.