ಹೊಸದಿಲ್ಲಿ, ೬: ಆರೋಗ್ಯವಾಗಿದ್ದ ಬಾಲಕ ಇದಕ್ಕಿದ್ದಂತೆ ರಕ್ತ ವಾಂತಿ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ ಏಳು ವರುಷದ ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬಾಲಕನಿಗೆ ಬುಧವಾರ ವಿಪರೀತ ಕೆಮ್ಮು ಆರಂಭವಾಗಿದ್ದು ಬಳಿಕ ರಕ್ತ ವಾಂತಿ ಮಾಡಿದ್ದಾನೆ ಇದರಿಂದ ಗಾಬರಿಗೊಂಡ ಪೋಷಕರು ಬಾಲಕನನ್ನು ದೆಹಲಿಯ ಏಮ್ಸ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಬಾಲಕನನ್ನು ಎಂಡೋಸ್ಕೋಪಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ ಬಾಲಕನ ಎಡ ಶ್ವಾಸಕೋಶದ ಭಾಗದಲ್ಲಿ ಸುಮಾರು ೪ ಸೆಂ.ಮೀ ಉದ್ದದ ಸೂಜಿಯೊಂದು ಪತ್ತೆಯಾಗಿದೆ.
ಈ ಕುರಿತು ಹೇಳಿಕೆ ನೀಡಿದ್ದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ವಿಶೇಶ ಜೈನ್ ಸಾಂಪ್ರದಾಯಿಕವಾಗಿ ಶ್ವಾಸಕೋಶಕ್ಕೆ ಹೊಕ್ಕಿದ್ದ ಸೂಜಿಯನ್ನು ಹೊರ ತೆಗೆಯುವುದು ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಇದನ್ನು ಹೊರ ತೆಗೆಯಲು ಹೊಸ ಪ್ರಯೋಗಕ್ಕೆ ಮುಂದಾಗಬೇಕಾಯಿತು ಎಂದು ಹೇಳಿದ್ದಾರೆ.
ಡಾ.ವಿಶೇಶ ಜೈನ್ ಹಾಗೂ ಇತರ ನುರಿತ ವೈದ್ಯರ ತಂಡ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ ಸೂಜಿಯನ್ನು ಹೊರತೆಗೆಯಲು ‘ಮ್ಯಾಗ್ನೆಟಿಕ್ ಸರ್ಜರಿ’ ನಡೆಸಲು ಮುಂದಾಗಿದೆ ಇದರ ಮೂಲಕ ಅಯಸ್ಕಾಂತ ಬಳಸಿ ಸೂಜಿಯನ್ನು ಹೊರತೆಗೆಯುವ ಹೊಸ ಪ್ರಯೋಗಕ್ಕೆ ವೈದಯರ ತಂಡ ಮುಂದಾಯಿತು. ಆದರೆ ಇದರ ನಡುವೆ ವೈದ್ಯರಿಗೆ ಇನ್ನೊಂದು ಸವಾಲು ಎದುರಾಗಿತ್ತು. ಅದೇನೆಂದರೆ ಇದು ವರೆಗೆ ಬಾಲಕನ ಶ್ವಾಸಕೋಶದ ನಾಳದ ಒಳಗೆ ಹೋಗುವಂತಹ ಅಯಸ್ಕಾಂತ ಹುಡುಕುವುದು ಆದರೆ ವೈದ್ಯರ ಪ್ರಯತ್ನದ ಫಲವಾಗಿ ಅಯಸ್ಕಾಂತ ಹೇಗೋ ಸಿಕ್ಕಿತು. ಆ ಬಳಿಕ ಅದನ್ನು ಎಂಡೋಸ್ಕೋಪಿ ಉಪಕರಣದ ತುದಿಗೆ ಅಳವಡಿಸಿ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೂಜಿಯನ್ನು ಹೊರತೆಗೆಯುವಲ್ಲಿ ಏಮ್ಸ ವೈದ್ಯರ ತಂಡ ಯಶಸ್ವಿಯಾಗಿದೆ.