LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗದ ವಯೋಮಿತಿ 5 ವರ್ಷ ಹೆಚ್ಚಳ

ಚೆನ್ನೈ, ಅ. 30: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಶುಕ್ರವಾರ ಘೋಷಿಸಿದ್ದಾರೆ. ಈ ಸಡಿಲಿಕೆಯು ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರಲಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳ ಮನವಿಗಳನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಜಾರಿಯಲ್ಲಿರುವ ವಯೋಮಿತಿ ಸಡಿಲಿಕೆ ನಿಯಮಗಳಿಗೆ ಹೆಚ್ಚುವರಿಯಾಗಿ ಹೊಸ ಸಡಿಲಿಕೆ ಅನ್ವಯವಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಗ್ರೂಪ್-1 ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32ರಿಂದ 37 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳ ವಯೋಮಿತಿ 37ರಿಂದ 42 ವರ್ಷಕ್ಕೆ ಹೆಚ್ಚಾಗಲಿದೆ.

ವಿಶೇಷಚೇತನ ಅಭ್ಯರ್ಥಿಗಳಿಗೂ ಸಡಿಲಿಕೆ ಅನ್ವಯವಾಗಲಿದ್ದು, ಗ್ರೂಪ್-1 ಹುದ್ದೆಗಳಿಗೆ ಸಾಮಾನ್ಯ ವರ್ಗದ ವಿಶೇಷಚೇತನ ಅಭ್ಯರ್ಥಿಗಳ ವಯೋಮಿತಿ 42ರಿಂದ 47 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದ ವಿಶೇಷಚೇತನ ಅಭ್ಯರ್ಥಿಗಳ ವಯೋಮಿತಿ 47ರಿಂದ 52 ವರ್ಷಕ್ಕೆ ಏರಿಕೆಯಾಗಲಿದೆ.

ಗ್ರೂಪ್-2 ಮತ್ತು ಗ್ರೂಪ್-2ಎ ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30ರಿಂದ 35 ವರ್ಷಕ್ಕೆ ಹಾಗೂ ಸಾಮಾನ್ಯ ವರ್ಗದ ವಿಶೇಷಚೇತನ ಅಭ್ಯರ್ಥಿಗಳ ವಯೋಮಿತಿ 40ರಿಂದ 45 ವರ್ಷಕ್ಕೆ ಹೆಚ್ಚಾಗಲಿದೆ.

ಈ ಹುದ್ದೆಗಳಿಗೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಈಗಾಗಲೇ ಗರಿಷ್ಠ ವಯೋಮಿತಿ ನಿರ್ಬಂಧವಿಲ್ಲ. ಹೀಗಾಗಿ ಆ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಸರ್ಕಾರದ ಈ ನಿರ್ಧಾರದಿಂದ ವಯೋಮಿತಿ ಮೀರಿದ ಕಾರಣ ಉದ್ಯೋಗಾವಕಾಶದಿಂದ ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಸೇನೆ, ಎಂಇಎಸ್ ಮುಖಂಡರಿಗೆ ಬೆಳಗಾವಿ ಪ್ರವೇಶ ನಿಷೇಧತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗದ ವಯೋಮಿತಿ 5 ವರ್ಷ ಹೆಚ್ಚಳನ್ಯಾಯಾಂಗ ಟೀಕಿಸಿದ ಸೌರವ ದಾಸ್ ವಿರುದ್ಧ ತನಿಖೆಗೆ ಅರ್ಜಿ192 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತದಾರರ ಹೆಸರು ಅಳಿಕೆ!ರೈತರ ಹೆದ್ದಾರಿ ಬಂದ್‌ಗೆ ಜಿಲ್ಲಾಡಳಿತ ನಿರ್ಬಂಧರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಬೆಳಗಾವಿಯ ಮೂವರು ಸೇರಿ 71 ಸಾಧಕರಿಗೆ ಗೌರವಗುಜರಾತ್‌ನಲ್ಲಿ ₹14,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆಜ್ಞಾನೇಶ ಕುಮಾರ ವಿರುದ್ಧದ ಸಾರ್ವಜನಿಕ ವಾಗ್ದಂಡನೆ ಶನಿವಾರಕ್ಕೆ ಮುಂದೂಡಿಕೆಹೆಲಿಕಾಪ್ಟರ್ ದುರಂತ: ಅಥಣಿ ತಾಲೂಕಿನ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಆರು ಮಂದಿ ಸಾವುಉತ್ತರ ಕರ್ನಾಟಕದ ಹಿರಿಯ ಚೇತನ, ಮುತ್ಸದ್ದಿ ಶಿವಾನಂದ ಕೌಜಲಗಿ ಇನ್ನಿಲ್ಲ