LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ವಿವಾದದ ನಡುವೆಯೇ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ ಕುಮಾರ ಗೌತಮ ಪ್ರಮಾಣ ವಚನ

ಗ್ಯಾಂಗಟಾಕ್, ಅ. 19: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ‘ವಿಐಪಿ’ ವಿವಾದಕ್ಕೆ ಸಂಬಂಧಿಸಿದಂತೆ ನೇಮಕಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ದುಷ್ಯಂತ್ ಕುಮಾರ್ ಗೌತಮ್ ಅವರು ಸೋಮವಾರ ಸಿಕ್ಕಿಂನ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಗ್ಯಾಂಗ್‌ಟಾಕ್‌ನ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿಕ್ಕಿಂ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ ಮುಸ್ತಾಕ ಅವರು ಗೌತಮ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ, ಸಚಿವ ಸಂಪುಟದ ಸದಸ್ಯರು, ವಿಧಾನಸಭೆ ಸ್ಪೀಕರ್, ಹೈಕೋರ್ಟ ನ್ಯಾಯಮೂರ್ತಿಗಳು, ಸಂಸದರು, ಶಾಸಕರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಮಾಣ ವಚನದ ಬಳಿಕ ಸಿಕ್ಕಿಂ ಸಶಸ್ತ್ರ ಪೊಲೀಸರು ನೂತನ ರಾಜ್ಯಪಾಲರಿಗೆ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ 12ರಂದು ದುಷ್ಯಂತ ಕುಮಾರ ಗೌತಮ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಿದ್ದರು. ಅವರು ಓಂ ಪ್ರಕಾಶ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನೇಮಕಕ್ಕೆ ವಿರೋಧ: ಗೌತಮ್ ಅವರ ನೇಮಕ ವಿರೋಧಿಸಿ ಕಳೆದ ವಾರ ಗ್ಯಾಂಗ್‌ಟಾಕ್‌ನ ಜಿಲ್ಲಾ ಆಡಳಿತ ಕೇಂದ್ರದ ಬಳಿ ಪಕ್ಷಾತೀತ ಯುವಕರು ಹಾಗೂ ನಾಗರಿಕರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು.

2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಪಾತ್ರದ ಕುರಿತು ‘ವಿಐಪಿ’ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅವರ ನೇಮಕವನ್ನು ಮುಂದೂಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳದಿರುವಾಗ ಗೌತಮ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೂ, ಅವರು ಸೋಮವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಜೆಪಿ ನಾಯಕರ ನ್ಯಾಯಾಂಗ ಬಂಧನ ಮತ್ತೆರಡು ದಿನ ವಿಸ್ತರಣೆಸಕ್ಕರೆ ಎಂಎಸ್‌ಪಿ ಘೋಷಣೆಗೆ ನ. 26ರವರೆಗೆ ಗಡುವು: ರೈತರ ಪಾದಯಾತ್ರೆ ಅಂತ್ಯಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಮೂಲಭೂತ ಹಕ್ಕುಚುನಾವಣೆಗೆ ಸ್ಪರ್ಧಿಸುವ ಇಚ್ಛೆ: ಕೊಲೆ ಅಪರಾಧಿಯ ಶಿಕ್ಷೆಗೆ ಹೈಕೋರ್ಟ ತಡೆಎಸ್‌ಐಆರ್‌ ವಿರುದ್ಧ ಅ. 23ರಂದು ರಾಜ್ಯಾದ್ಯಂತ ರೈತ, ದಲಿತ ಸಂಘಟನೆಗಳ ಪ್ರತಿಭಟನೆವಿವಾದದ ನಡುವೆಯೇ ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ ಕುಮಾರ ಗೌತಮ ಪ್ರಮಾಣ ವಚನಲಾರೆನ್ಸ ಬಿಷ್ಣೋಯ ಗ್ಯಾಂಗಸ್ಟರ್‌ಗೆ ‘ಸಾಹೇಬ’ ಗೌರವ : ದೆಹಲಿ ಪೊಲೀಸರ ವಿರುದ್ಧ ದೀಪ್ಕೆ ಆಕ್ರೋಶಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಮೂವರು ಶಂಕಿತರು ವಶಕ್ಕೆಪೊಲೀಸ್ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ ಮೆಟ್ಟಿಲೇರಿದ ನೇಹಾ ಬೋರಾಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಧ್ಯಪ್ರವೇಶಿಸಿ: ಪ್ರಧಾನಿಗೆ ಡಿ.ಕೆ. ಶಿವಕುಮಾರ ಪತ್ರ