LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Health & Fitness

ಈ ರೋಗಗಳಿಗೆ ಮನೆ ಮದ್ದು ಜೀರಿಗೆ ಬೆಲ್ಲದ ನೀರು

ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.



ರಕ್ತಹೀನತೆಗೆ ಮದ್ದು : ಜೀರಿಗೆ ಬೆಲ್ಲದ ನೀರನ್ನು ಪ್ರತಿದಿನ ಸೇವಿಸುತ್ತ ಬಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ಕಲ್ಮಶವನ್ನು ಇದು ಹೊರ ಹಾಕುತ್ತದೆ.



ತಲೆ ನೋವಿಗೆ ರಾಮಬಾಣ : ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೀರಿಗೆ ನೀರಿಗೆ ಬೆಲ್ಲ ಬೆರೆಸಿ ಕುಡಿಯಿರಿ. ಇದು ಜ್ವರವನ್ನೂ ಕಡಿಮೆ ಮಾಡುತ್ತದೆ.



ಪ್ರತಿರಕ್ಷಣಾ ವ್ಯವಸ್ಥೆಗೆ ಬಲ : ಜೀರಿಗೆ ಹಾಗೂ ಬೆಲ್ಲ ಪ್ರಾಕೃತಿಕ ಗುಣಗಳನ್ನು ಹೊಂದಿದೆ. ದೇಹದಲ್ಲಿರುವ ಕಲ್ಮಶವನ್ನು ಹೊರಗೆ ಹಾಕಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.



ಹೊಟ್ಟೆ ರೋಗಕ್ಕೆ ಗುಡ್ ಬೈ : ಮಲಬದ್ಧತೆ, ಗ್ಯಾಸ್, ಹೊಟ್ಟೆ ನೋವು ಸೇರಿದಂತೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗೆ ಜೀರಿಗೆ ಬೆಲ್ಲದ ನೀರು ಮದ್ದು. ನಿಯಮಿತವಾಗಿ ಈ ನೀರನ್ನು ಕುಡಿಯುತ್ತ ಬಂದರೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ದೂರವಾಗುತ್ತವೆ.



ಮುಟ್ಟಿನ ನೋವಿಗೆ ಪರಿಹಾರ : ಅನಿಯಮಿತ ಮುಟ್ಟು ಅಥವಾ ಮುಟ್ಟಿನ ನೋವಿಗೆ ಜೀರಿಗೆ ಬೆಲ್ಲದ ನೀರು ಪರಿಣಾಮಕಾರಿ.



ಬೆನ್ನು ನೋವಿಗೆ ಔಷಧಿ : ಬೆನ್ನು ನೋವಿರಲಿ, ಕಾಲು ನೋವಿರಲಿ ಜೀರಿಗೆ ಬೆಲ್ಲದ ನೀರು ಮಾತ್ರೆಯಂತೆ ಕೆಲಸ ಮಾಡುತ್ತದೆ. ಜೀರಿಗೆ ಬೆಲ್ಲದ ನೀರು ಸೇವಿಸುತ್ತ ಬಂದಲ್ಲಿ ಎಲ್ಲ ನೋವು ಶಮನವಾಗುತ್ತದೆ.



ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ. ಅದಕ್ಕೆ ಒಂದು ಚಮಚ ಬೆಲ್ಲ ಹಾಗೂ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣಸಮಾಜದ ಜಟಿಲ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಲಿ: ಡಾ. ಅಲ್ಲಮಪ್ರಭು ಶ್ರೀ