LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಪ್ರಜ್ವಲ್ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳು ಪತ್ತೆ

ಬೆಂಗಳೂರು, ಸೆ 12 : (ಸಮದರ್ಶಿ ಸುದ್ದಿ) - ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಳಸಿದ್ದ ಎನ್ನಲಾದ ಮೊಬೈಲ್‌ನ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಅಶ್ಲೀಲ ವಿಡಿಯೊಗಳು ಸೇರಿದಂತೆ ಹಲವು ವಿಡಿಯೊ ಕಡತಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಾರಾಗೃಹದಲ್ಲಿ ನಡೆಸಿದ್ದ ದಿಢೀರ್ ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ ರೈ ಇದ್ದ ಕೊಠಡಿಯಲ್ಲಿ ಮೊಬೈಲ್, ಸಿಮ್ ಕಾರ್ಡ್, ಚಾರ್ಜರ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಮೊಬೈಲ್ ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಪರಿಶೀಲನೆಯ ವೇಳೆ ಮೊಬೈಲ್ ಮತ್ತು ಪೆನ್‌ಡ್ರೈವ್‌ನಲ್ಲಿ ಒಟ್ಟು 173 ವಿಡಿಯೊ ಕಡತಗಳು ಪತ್ತೆಯಾಗಿದ್ದು, ಅವುಗಳಲ್ಲಿ ಸಿನಿಮಾ, ಜಾಲತಾಣ ಸರಣಿಗಳು ಹಾಗೂ ಅಶ್ಲೀಲ ವಿಡಿಯೊಗಳೂ ಸೇರಿವೆ ಎಂದು ವರದಿಯಾಗಿದೆ.

ಜೈಲಿನೊಳಗೆ ನಿಷೇಧಿತ ಮೊಬೈಲ್ ಹೇಗೆ ತಲುಪಿತು ಎಂಬ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕಾರಾಗೃಹ ಸಿಬ್ಬಂದಿ ಹಾಗೂ ಇತರ ಕೈದಿಗಳ ಸಂಪರ್ಕದ ಸುಳಿವು ದೊರೆತಿದೆ. ಮೊಬೈಲ್ ತರಿಸಿಕೊಳ್ಳಲು ಸುಮಾರು ₹70 ಸಾವಿರ ಹಾಗೂ ಸಿಮ್ ಕಾರ್ಡ್‌ಗಾಗಿ ₹30 ಸಾವಿರ ಪಾವತಿಸಲಾಗಿದೆ ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.

ಜೈಲು ಸಿಬ್ಬಂದಿಯೊಬ್ಬರು ಮೊಬೈಲ್ ತಲುಪಿಸಲು ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ಮುಂದುವರಿದಂತೆ ಜೈಲಿನೊಳಗೆ ಹಣ ಪಡೆದು ಮೊಬೈಲ್ ಪೂರೈಸುತ್ತಿದ್ದ ದೊಡ್ಡ ಜಾಲದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.

ವಶಪಡಿಸಿಕೊಂಡ ಸಿಮ್ ಕಾರ್ಡ್ ಆಂಧ್ರಪ್ರದೇಶ ಮೂಲದ್ದಾಗಿದ್ದು, ಅದು ಹಲವು ತಿಂಗಳಿಂದ ಸಕ್ರಿಯವಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಪತ್ತೆಯಾಗಿದೆ. ಮೊಬೈಲ್ ಮೂಲಕ ಯಾರನ್ನು ಸಂಪರ್ಕಿಸಲಾಗಿದೆ, ಯಾವ ಉದ್ದೇಶಕ್ಕೆ ಬಳಸಲಾಗಿದೆ ಹಾಗೂ ಇದಕ್ಕೆ ಇನ್ನೂ ಯಾವ ಸಿಬ್ಬಂದಿ ನೆರವಾಗಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST