LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಶಿವಮೊಗ್ಗ ದಸರಾದಲ್ಲಿ ಬೆದರಿದ ಸೋಮಣ್ಣ ಆನೆ: ಅಂಬಾರಿ ನೆಲಕ್ಕೆ, ಜಂಬೂಸವಾರಿ ಸ್ಥಗಿತ

ಶಿವಮೊಗ್ಗ, ಅ. 21 (ಸಮದರ್ಶಿ ಸುದ್ದಿ): ಶಿವಮೊಗ್ಗ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ಚಾಮುಂಡೇಶ್ವರಿ ದೇವಿಯ ಮೂರ್ತಿ ಇರಿಸಿದ್ದ ಬೆಳ್ಳಿಯ ಅಂಬಾರಿ ನೆಲಕ್ಕೆ ಬಿದ್ದು ಹಾನಿಗೊಳಗಾಗಿದೆ. ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಮೆರವಣಿಗೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ.

ನಗರದ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆಯಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಿತ್ತು. ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ಹಿಂದಕ್ಕೆ ಚಲಿಸಿತು. ಆನೆಯ ಅನಿರೀಕ್ಷಿತ ವರ್ತನೆಯಿಂದ ಅಂಬಾರಿ ಕೆಳಗೆ ಬಿದ್ದು ಹಾನಿಗೊಳಗಾಯಿತು.

ಆನೆ ನಿಯಂತ್ರಣ ತಪ್ಪಿ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿದ್ದ 2 ಕಾರುಗಳು ಹಾಗೂ 3 ಬೈಕ್‌ಗಳಿಗೆ ಹಾನಿಯಾಗಿದೆ. ಮೆರವಣಿಗೆಯನ್ನು ವೀಕ್ಷಿಸಲು ಸೇರಿದ್ದ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಆನೆಯನ್ನು ಹತೋಟಿಗೆ ತರಲು ಮಾವುತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಂಬೂಸವಾರಿ ಮೆರವಣಿಗೆಯನ್ನು ಮುಂದುವರಿಸದಿರಲು ನಿರ್ಧರಿಸಲಾಯಿತು.

ಘಟನೆಯ ಬಳಿಕ ಸೋಮಣ್ಣ ಆನೆಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದರು. ಅದ್ದೂರಿಯಾಗಿ ನಡೆಯಬೇಕಿದ್ದ ಶಿವಮೊಗ್ಗ ದಸರಾ ಜಂಬೂಸವಾರಿ ಅನಿರೀಕ್ಷಿತ ಘಟನೆಯಿಂದ ಅರ್ಧದಲ್ಲೇ ಮೊಟಕುಗೊಂಡಿತು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕೇರಿ ಕೆರೆಯಲ್ಲಿ ಮುಳುಗಿ ಯುವಕನ ಸಾವುಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹಬುಲೆರೋ–ಟ್ರ್ಯಾಕ್ಟರ್ ಅಪಘಾತ: ಯುವಕ ಸಾವುಪೊಲೀಸರು ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಡಿ.ಕೆ. ಶಿವಕುಮಾರಅಜರುದ್ದೀನ್ ಅವರ 28 ವರ್ಷಗಳ ದಾಖಲೆ ಮುರಿದ ಬವುಮಾಮೈಸೂರು ದಸರಾ ಜಂಬೂಸವಾರಿಗೆ ಚಾಲನೆ: ಚಾಮುಂಡೇಶ್ವರಿಗೆ ಡಿ.ಕೆ. ಶಿವಕುಮಾರ ಪುಷ್ಪಾರ್ಚನೆಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರತೃಣಮೂಲ ತೊರೆದು ಎನ್‌ಡಿಎ ಬೆಂಬಲಿಸಿದ ಯೂಸುಫ ಪಠಾಣಗೆ ₹20.53 ಕೋಟಿ ಮೌಲ್ಯದ ಜಮೀನುಎಸ್‌ಐಆರ್‌ ಪ್ರಕ್ರಿಯೆಯಲ್ಲಿ 4 ನಿಯಮ ಸಡಿಲಿಸಿದ ಚುನಾವಣಾ ಆಯೋಗ