LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹ

ಹೊಸದಿಲ್ಲಿ, ಅ. 21: ಚುನಾವಣಾ ಆಯುಕ್ತರಿಗೆ ಕಾನೂನು ಕ್ರಮಗಳಿಂದ ವಿನಾಯಿತಿ ನೀಡುವ ಕಾಯ್ದೆಯಲ್ಲಿನ ನಿಬಂಧನೆಯನ್ನು ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಚುನಾವಣಾ ಆಯುಕ್ತರು ಅಧಿಕೃತ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೈಗೊಳ್ಳುವ ನಿರ್ಧಾರಗಳು ಹಾಗೂ ನೀಡುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಂದ ರಕ್ಷಣೆ ಒದಗಿಸುವ ಕಾನೂನು ನಿಬಂಧನೆಗೆ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಳು ನಡೆಯುವುದು ಅತ್ಯಂತ ಮುಖ್ಯ. ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಆಕ್ಷೇಪವಿಲ್ಲ. ಕಾಂಗ್ರೆಸ್ ಅಥವಾ ಬೇರೆ ಯಾವುದಾದರೂ ನಿರ್ದಿಷ್ಟ ಪಕ್ಷವೇ ಗೆಲ್ಲಬೇಕೆಂಬ ನಿಯಮ ಸಂವಿಧಾನದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

ವಿರೋಧ ಪಕ್ಷಗಳ ಹೋರಾಟ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಉಳಿಸುವುದೇ ಇದರ ಉದ್ದೇಶ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ವಿರೋಧ ಪಕ್ಷಗಳು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದ ಅವರು, ತಮಗೆ ಬರೆದ ಪತ್ರಗಳಿಗೆ ಇತರ ಸಚಿವರ ಮೂಲಕ ಉತ್ತರ ನೀಡುತ್ತಿರುವುದನ್ನು ಟೀಕಿಸಿದ್ದಾರೆ.

ಪ್ರಧಾನಿಗೆ ತಾವು ಬರೆದ ಪತ್ರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಪ್ರತಿಕ್ರಿಯಿಸಿರುವುದನ್ನು ಪ್ರಸ್ತಾಪಿಸಿದ ಖರ್ಗೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಅವರೇ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇತರರ ಮೂಲಕ ಉತ್ತರ ನೀಡುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕೇರಿ ಕೆರೆಯಲ್ಲಿ ಮುಳುಗಿ ಯುವಕನ ಸಾವುಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹಬುಲೆರೋ–ಟ್ರ್ಯಾಕ್ಟರ್ ಅಪಘಾತ: ಯುವಕ ಸಾವುಪೊಲೀಸರು ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಡಿ.ಕೆ. ಶಿವಕುಮಾರಅಜರುದ್ದೀನ್ ಅವರ 28 ವರ್ಷಗಳ ದಾಖಲೆ ಮುರಿದ ಬವುಮಾಮೈಸೂರು ದಸರಾ ಜಂಬೂಸವಾರಿಗೆ ಚಾಲನೆ: ಚಾಮುಂಡೇಶ್ವರಿಗೆ ಡಿ.ಕೆ. ಶಿವಕುಮಾರ ಪುಷ್ಪಾರ್ಚನೆಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರತೃಣಮೂಲ ತೊರೆದು ಎನ್‌ಡಿಎ ಬೆಂಬಲಿಸಿದ ಯೂಸುಫ ಪಠಾಣಗೆ ₹20.53 ಕೋಟಿ ಮೌಲ್ಯದ ಜಮೀನುಎಸ್‌ಐಆರ್‌ ಪ್ರಕ್ರಿಯೆಯಲ್ಲಿ 4 ನಿಯಮ ಸಡಿಲಿಸಿದ ಚುನಾವಣಾ ಆಯೋಗ