LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ತೊಗರಿಬೇಳೆ ಬೆಲೆ ಏರಿಕೆ: ಕೆಜಿಗೆ ₹10 ಹೆಚ್ಚಳ

ಬೆಂಗಳೂರು, ಸೆ 11 : (ಸಮದರ್ಶಿ ಸುದ್ದಿ) - ನಿತ್ಯದ ಅಡುಗೆಯಲ್ಲಿ ಪ್ರಮುಖವಾಗಿ ಬಳಕೆಯಾಗುವ ತೊಗರಿಬೇಳೆ ಬೆಲೆ ಮತ್ತೆ ಏರುಮುಖವಾಗಿದ್ದು, ಕೆಲವೇ ದಿನಗಳಲ್ಲಿ ಕೆಜಿಗೆ ಸುಮಾರು ₹10ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆಯಿಂದ ಉತ್ಪಾದನೆ ಕುಸಿದಿರುವುದು ಹಾಗೂ ಮಾರುಕಟ್ಟೆಗೆ ತೊಗರಿ ಪೂರೈಕೆ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.

ರಾಜ್ಯದ ಪ್ರಮುಖ ತೊಗರಿ ಉತ್ಪಾದನಾ ಪ್ರದೇಶವಾದ ಕಲಬುರಗಿ ಜಿಲ್ಲೆಯಲ್ಲಿ ತೊಗರಿಕಾಳು ಹಾಗೂ ತೊಗರಿಬೇಳೆ ದರ ನಿರಂತರವಾಗಿ ಏರುತ್ತಿದೆ. ಕಳೆದ ವರ್ಷ ಪ್ರವಾಹ ಮತ್ತು ನೆಟೆರೋಗದಿಂದ ತೊಗರಿ ಇಳುವರಿ ಕುಸಿದಿದ್ದರೆ, ಈ ಬಾರಿ ಮಳೆಯ ಕೊರತೆಯಿಂದ ಉತ್ಪಾದನೆಗೆ ಹೊಡೆತ ಬಿದ್ದಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತೊಗರಿ ಲಭ್ಯತೆ ಕಡಿಮೆಯಾಗಿದ್ದು, ದರ ಏರಿಕೆಗೆ ಕಾರಣವಾಗಿದೆ.

ಕಲಬುರಗಿ ಗಂಜ್ ಮಾರುಕಟ್ಟೆಯಲ್ಲಿ ಈ ತಿಂಗಳ ಆರಂಭದಲ್ಲಿ ಕ್ವಿಂಟಲ್ ತೊಗರಿಕಾಳಿನ ದರ ₹8,000ರಿಂದ ₹8,500ರವರೆಗೆ ಇತ್ತು. ಇದೀಗ ಅದು ₹9,000ರಿಂದ ₹9,500ರವರೆಗೆ ಏರಿಕೆಯಾಗಿದೆ. ಕೆಲವೇ ದಿನಗಳಲ್ಲಿ ಕ್ವಿಂಟಲ್‌ಗೆ ಸುಮಾರು ₹1,000 ಹೆಚ್ಚಳವಾಗಿರುವುದು ಚಿಲ್ಲರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.

ಇದರ ಪರಿಣಾಮವಾಗಿ ತೊಗರಿಬೇಳೆಯ ಚಿಲ್ಲರೆ ದರ ಕೆಜಿಗೆ ಸುಮಾರು ₹10ರಷ್ಟು ಹೆಚ್ಚಳ ಕಂಡಿದೆ. ಮಾರುಕಟ್ಟೆಯಲ್ಲಿ ಹಳೆಯ ದಾಸ್ತಾನು ಕಡಿಮೆಯಾಗುತ್ತಿದ್ದು, ಹೊಸ ತೊಗರಿ ಪೂರೈಕೆಯೂ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.

ಹಬ್ಬಗಳ ಸಾಲು ಆರಂಭವಾಗಿರುವ ಸಂದರ್ಭದಲ್ಲಿ ಬೇಳೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿರುವುದು ಸಾಮಾನ್ಯ ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಹೆಚ್ಚುವರಿ ಹೊರೆ ಬೀರುವ ಸಾಧ್ಯತೆಯಿದೆ.

ತೊಗರಿ ಉತ್ಪಾದನೆ ಕುಸಿದಿರುವುದೇ ಸದ್ಯದ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕಲಬುರಗಿ ಮಾರುಕಟ್ಟೆಯಲ್ಲಿ ತೊಗರಿ ದಾಸ್ತಾನು ಕಡಿಮೆಯಾಗಿದ್ದು, ಪೂರೈಕೆ ಸುಧಾರಿಸದಿದ್ದರೆ ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಬಹುದು ಎಂದು ತೊಗರಿ ವ್ಯಾಪಾರಿ ನಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿದ್ದರೂ ಅದರ ಸಂಪೂರ್ಣ ಲಾಭ ತೊಗರಿ ಬೆಳೆದ ರೈತರಿಗೆ ದೊರೆಯುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೊಗರಿಬೇಳೆ ಬೆಲೆ ಏರಿಕೆ: ಕೆಜಿಗೆ ₹10 ಹೆಚ್ಚಳಹೆಸರಿನ ಸಣ್ಣ ವ್ಯತ್ಯಾಸಕ್ಕೂ ನಿವೃತ್ತ ಐಎಎಸ್ ಅಧಿಕಾರಿಗೆ ನೋಟಿಸ್; ಜೈಲು ಶಿಕ್ಷೆ ಎಚ್ಚರಿಕೆಧೀರೇಂದ್ರ ಶಾಸ್ತ್ರಿ ಹೇಳಿಕೆಗೆ ತಿರುಗೇಟು : ದೇವಸ್ಥಾನದಲ್ಲಿ ಮೀನಿನ ಊಟ ಸವಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ!ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು ನಡೆಸುವ ನಮ್ಮ ಬಳಿ 2 ಕೋಟಿ ಇದ್ದದ್ದು ದೊಡ್ಡ ಮೊತ್ತವಲ್ಲ : ಸತೀಶ ಜಾರಕಿಹೊಳಿಕಣಕುಂಬಿ ಬಳಿ 400 ಲೀಟರ್ ಗೋವಾ ಮದ್ಯ ವಶ, ಇಬ್ಬರ ಬಂಧನಸತೀಶ ಜಾರಕಿಹೊಳಿ, ಆಪ್ತರ ಮನೆಗಳಲ್ಲಿ ಇಡಿ ಶೋಧ ಅಂತ್ಯಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಿ ಹೆಬ್ಬಾಳಕರಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲಮತ್ತೆ ಗಾಯಗೊಂಡ ಹರ್ಷಿತ ರಾಣಾ: ಅಫ್ಘಾನಿಸ್ತಾನ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹೊರಕ್ಕೆಎಸ್‌ಐಆರ್‌ ಅಚ್ಚರಿ: ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!