ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಯುವಜನರನ್ನು ನೀವು ಹಾಳುಗೆಡವುತ್ತಿದ್ದೀರಿ; ಏಕ್ತಾ ಕಪೂರಗೆ ಸುಪ್ರೀಮ ಕೋರ್ಟ ತರಾಟೆ

ಹೊಸದಿಲ್ಲಿ, ೧೫- ಓ ಟಿ ಟಿ ಯಲ್ಲಿ ಪ್ರಸಾರವಾಗಿರುವ ‘ಎಕ್ಸ್ ಎಕ್ಸ್ ಎಕ್ಸ್’ ವೆಬ್ ಸರಣಿಯಲ್ಲಿ ಯೋಧರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ನಿರ್ಮಾಪಕಿ ಏಕ್ತಾ ಕಪೂರ ಅವರ ವಿರುದ್ಧ ವ್ಯಕ್ತಿ ಒಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಬಂಧನ ವಾರೆಂಟ್ ಹೊರಡಿಸಲಾಗಿದೆ.

ಇದನ್ನು ಪ್ರಶ್ನಿಸಿ ನಿರ್ಮಾಪಕಿ ಏಕ್ತಾ ಕಪೂರ್, ಸುಪ್ರೀಮ ಕೋರ್ಟ ಕದ ತಟ್ಟಿದ್ದು ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ ಹಾಗೂ ಸಿ.ಟಿ. ರವಿಕುಮಾರ ಅವರುಗಳಿದ್ದ ಪೀಠ ಏಕ್ತಾ ಕಪೂರ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ನೀವು ದೇಶದ ಯುವ ಸಮೂಹವನ್ನು ಹಾಳುಗೆಡವುತ್ತಿದ್ದೀರಿ ಎಂದು ಹೇಳಿದ ನ್ಯಾಯ ಪೀಠ, ಒಟಿಟಿಯಲ್ಲಿ ಜನರಿಗೆ ನೀವು ಯಾವ ರೀತಿ ಆಯ್ಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅಲ್ಲದೇ ಒಟಿಟಿಯಲ್ಲಿ ಪ್ರಸಾರವಾಗುವುದರಿಂದ ಇದು ಎಲ್ಲರಿಗೂ ಲಭ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.