ಮಂಗಳೂರು : ವೇಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ರವಿವಾರ ಸಂಭವಿಸಿದೆ.
ಕಾರಿನಲ್ಲಿದ್ದ ತಮಿಳುನಾಡಿನ ಹೊಸೂರು ಕೃಷ್ಣಗಿರಿ ಮೂಲದ ಹರಿಪ್ರಸಾದ (44) ಎಂಬುವವರು ಮೃತಪಟ್ಟಿದ್ದಾರೆ. ಚಾಲಕ ಗೋಪಿ (45) ಎಂಬವರ ಕಾಲು ಮುರಿದಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಕಾರು ಮೇಲೆತ್ತುವಲ್ಲಿ ನೆರವು ನೀಡಿದರು.