ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಕಳೆದ 19 ದಿನಗಳಿಂದ ಅವಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ.
ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆಗಳು ಈಗಾಗಲೇ ಗಾಲ್ಫ್ ಕೋರ್ಸ್ ನ ಪೊದೆಯೊಳಗೆ ನುಗ್ಗಿವೆ.
ವನ್ಯಜೀವಿ ತಜ್ಞ ಡಾ. ವಿನಯ ನೇತೃತ್ವದಲ್ಲಿ ಈ ವಿಶೇಷ ತಂಡ ಬಂದಿದೆ. ಸಕ್ರೇಬೈಲು ಬಿಡಾರದ ಅರ್ಜುನ ಹಾಗೂ ಆಲೆ ಆನೆ ಬಂದಿವೆ. ವೈದ್ಯರು, ಸಹಾಯಕ ಸಿಬ್ಬಂದಿ, ಸೇರಿದಂತೆ 8 ಜನರ ತಂಡ ಆಗಮಿಸಿದೆ.