ಬೆಂಗಳೂರು; ಭಾರತ ಜೋಡೋ ಯಾತ್ರೆಗೆ ಸಂಬಂಧಿಸಿದ ವಿಡಿಯೋದಲ್ಲಿ ಕೆಜಿಎಫ್ ಸಿನಿಮಾ ಹಾಡು ಬಳಕೆ ಮಾಡಿದ್ದಕ್ಕೆ ಕಾಪಿರೈಟ್ ಉಲ್ಲಂಘನೆ ಆರೋಪದಲ್ಲಿ ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲು ಕೋರ್ಟ ಆದೇಶ ನೀಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ರಾಹುಲ್ ಗಾಂಧಿ ಡಾನ್ಸ್ ಗೆ ನಮ್ಮ ಕಾರ್ಯಕರ್ತರೊಬ್ಬರು ಕೆ ಜಿ ಎಫ್ ಹಾಡು ಸೇರಿಸಿ ವಿಡಿಯೋ ಮಾಡಿದ್ದರು. ಅದನ್ನು ಟ್ವೀಟ್ ನಲ್ಲಿ ಪ್ರಕಟಿಸಲಾಗಿತ್ತು. ಇದನ್ನೇ ನೆಪವಾಗಿಸಿ ನಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಟ್ವಿಟರ್ ಖಾತೆಯನ್ನಾದರೂ ಬ್ಲಾಕ್ ಮಾಡಿ, ಅಥವಾ ರಾಹುಲ್ ಗಾಂಧಿಯವರನ್ನಾದರೂ ಜೈಲಿಗೆ ಹಾಕಿ. ನಮ್ಮ ಹೋರಾಟ, ಪ್ರಯತ್ನಗಳು ನಿಲ್ಲಲ್ಲ. ನಾವು ಎಂಥದ್ದೇ ಸಂದರ್ಭವನ್ನಾದರೂ ಎದುರಿಸಲು ಸಜ್ಜಾಗಿದ್ದೇವೆ ಎಂದು ಗುಡುಗಿದ್ದಾರೆ.