ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ; ಕನ್ನಡ ಸಂಘಟನೆಗಳ ಸ್ವಾಗತ

A B Dharwadkar
ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ; ಕನ್ನಡ ಸಂಘಟನೆಗಳ ಸ್ವಾಗತ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ
ವಿಧೇಯಕವನ್ನು ರಾಜ್ಯ ವಿಧಾನಸಭೆಯು ಗುರುವಾರ ಸರ್ವಾನುಮತದಿಂದ ಅಂಗೀಕರಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳಕ್ರಿಯಾ ಸಮಿತಿ ಅಭಿನಂದಿಸಿದೆ.

1956 ರಲ್ಲಿ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಕನ್ನಡ ಅನುಷ್ಠಾನದಲ್ಲಿ ಹಾಗೂ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅನೇಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದವು .ಈ ಹಿನ್ನೆಲೆಯಲ್ಲಿ
ಕನ್ನಡಿಗರಿಗೆ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಪಡೆಯುವದು ಸಾಧ್ಯವಾಗಿರಲಿಲ್ಲ. ಈ ಉದ್ದೇಶವನ್ನು ಸಾಫಲ್ಯಗೊಳಿಸಲು ಕನ್ನಡಕ್ಕೆ ಕಾನೂನಿನ ಬಲ ತಂದುಕೊಡಬೇಕೆಂಬ ಕನ್ನಡಿಗರ ಆಶಯಕ್ಕೆ ಯಾವ ಸರಕಾರವೂ ಬೆಂಬಲ ನೀಡಿರಲಿಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ
ವಹಿಸಿಕೊಂಡ ನಂತರ ಈ ದಿಸೆಯತ್ತ
ಸಕಾರಾತ್ಮಕ ಹೆಜ್ಜೆಗಳನ್ನು ಇರಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸಹ ವಿಧೇಯಕವನ್ನು
ಸಿದ್ಧಪಡಿಸಿತು. ಇದನ್ನು ಬೊಮ್ಮಾಯಿ ಅವರು ಸಂಪೂರ್ಣವಾಗಿ ಬೆಂಬಲಿಸಿದರು.ಕೊನೆಗೆ ರಾಜ್ಯ
ವಿಧಾನಸಭೆಯು ವಿಧೇಯಕವನ್ನು ಅಂಗೀಕರಿಸುವ ಮೂಲಕ ಕನ್ನಡಿಗರ ಕನಸನ್ನು ನನಸಾಗಿಸಿದೆ ಎಂದು ಸಮಿತಿ ತಿಳಿಸಿದೆ.

ಕರ್ನಾಟಕ ಅಥವಾ ಯಾವದೇ ರಾಜ್ಯದಲ್ಲಿ
ಒಂದರಿಂದ ಹತ್ತನೇ ತರಗತಿಯವರೆಗೆ
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಈ ವಿಧೇಯಕವು ಅವಕಾಶ ಕಲ್ಪಿಸಿರುವದು ಅತ್ಯಂತ ಮಹತ್ವದ ಅಂಶವಾಗಿದೆ. ಹೊರನಾಡ ಕನ್ನಡಿಗರಿಗೆ
ಇದೊಂದು ವರವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಹೊರನಾಡ ಕನ್ನಡಿಗರಿಗೆ ಕರ್ನಾಟಕದಲ್ಲಿ ಶಿಕ್ಷಣ
ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಕಳೆದ ಜನೇವರಿ 25 ರಂದು ಬೆಂಗಳೂರಿನಲ್ಲಿ ಗಡಿ
ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ಸೇರಿದ್ದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ,
ತಮಿಳುನಾಡು, ಕೇರಳ ಮತ್ತು ಗೋವೆಯ ಕನ್ನಡಿಗರ
ಪ್ರಾತಿನಿಧಿಕ ಸಭೆಯು ಮುಖ್ಯಮಂತ್ರಿಗಳನ್ನು
ಆಗ್ರಹಿಸಿತ್ತು.

ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹಾಗೂ ಹಿರಿಯ ಕನ್ನಡ ಹೋರಾಟಗಾರ ಶ್ರೀ ಅಶೋಕ
ಚಂದರಗಿ ಅವರು ಇದೇ ಫೆಬ್ರುವರಿ 2 ರಂದು
ಮುಖ್ಯಮಂತ್ರಿಗಳಿಗೆ ವರದಿಯೊಂದನ್ನು ಸಲ್ಲಿಸಿದ್ದರು.
ಕನ್ನಡ, ಕನ್ನಡಿಗರ ಶಿಕ್ಷಣ, ಉದ್ಯೋಗದ ಸಂಬಂಧದ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ ಬೊಮ್ಮಾಯಿ ಅವರನ್ನು ಅಭಿನಂದಿಸಲು ರಾಜ್ಯದ ಮತ್ತು
ನೆರೆಯ ರಾಜ್ಯಗಳ ಕನ್ನಡ ಸಂಘಟನೆಗಳು
ಬರುವ ಮಾರ್ಚ ಎರಡನೇ ವಾರದಲ್ಲಿ
ಬೆಂಗಳೂರಿಗೆ ತೆರಳಲಿವೆ ಎಂದು ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸಂಚಾಲಕರ ಅಶೋಕ ಚಂದರಗಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.